ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾ ಶಿವರಾತ್ರಿ ಉತ್ಸವ ಮಾ.1 ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6 ರಿಂದ ಏಕಾಹ ಭಜನೆ ಆರಂಭ, 6.30 ಕ್ಕೆ ಗಣಪತಿ ಹೋಮ, 7.30 ಕ್ಕೆ ಬೆಳಿಗ್ಗಿನ ಪೂಜೆ, 8.30 ಕ್ಕೆ ಶತರುದ್ರಾಭಿಷೇಕ, 10 ರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ತಂಡದವರಿಂದ ಶಾಸ್ತ್ರೀಯ ಸಂಗೀತ ಕಚೇರಿ, 12 ರಿಂದ ತುಲಾಭಾರ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2 ರಿಂದ ವಿದುಷಿಃ ವಿದ್ಯಾಲಕ್ಷ್ಮೀ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ನಡೆಯಲಿದೆ. ಸಂಜೆ 6.30 ಕ್ಕೆ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ದೀಪಾರಾಧನೆ, 7.30 ರಿಂದ ಶ್ರೀದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ನಡೆಯಲಿದೆ. ರಾತ್ರಿ 9.30 ಕ್ಕೆ ಉದನೇಶ್ವರ ಕಲಾಸಂಘ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.2 ರಂದು ಬೆಳಿಗ್ಗೆ 7.30 ಕ್ಕೆ ಬೆಳಗ್ಗಿನ ಪೂಜೆ, 10 ರಿಂದ ಶ್ರೀದೇವರ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, 12.30 ಕ್ಕೆ ಶ್ರೀಪಿಲಿಚಾಮುಂಡಿ ದೈವಕೋಲ, ಅರಸಿನಹುಡಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.




