ಪಾಲಕ್ಕಾಡ್: ಚೇರಾಡ್ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಗಂಟೆಗಳ ಕಾಲ ಶ್ರಮವಹಿಸಿ ರಕ್ಷಿಸಿದ ಭಾರತೀಯ ಸೇನೆಗೆ ಸ್ಥಳೀಯರು ಗೌರವ ನಮನ ಸಲ್ಲಿಸಿದರು. ಮಲಂಪುಳದ ಜನರು ಸೇನಾ ಅಧಿಕಾರಿಗಳನ್ನು ಶಾಲುಹೊದೆಸಿ,ಹಾರಹಾಕಿ ಉಡುಗೊರೆ ನೀಡಿ ಗೌರವಿಸಿದರು. ಅವರಿಗೆ ಹಾರ ಹಾಕಿ, ತಿಲಕವಿಟ್ಟು ಅಭಿನಂದಿಸಲಾಯಿತು. ಸ್ಥಳೀಯರ ಅಪರಿಮಿತ ಸಂಭ್ರಮದ ಅಭಿನಂದನಾ ಕಾರ್ಯಕ್ರಮದ ವಿಡಿಯೋ ತುಣುಕನ್ನೂ ಬಿಡುಗಡೆ ಮಾಡಲಾಗಿದೆ.
ಸ್ಥಳೀಯರು ಸೈನಿಕರೊಂದಿಗೆ ಭಾರತ್ ಮಾತಾ ಕೀ ಜೈ ಎಂದು ಮುಗಿಲುಮುಟ್ಟುವ ಜಯಘೋಷ ಹೊಸ ವಾತಾವರಣ ನಿರ್ಮಿಸಿತು. ಜಯಘೋಷದ ಸಂದರ್ಭದಲ್ಲಿ ವಂದೇ ಮಾತರಂ ಮೊಳಗಿದವು. ಎರಡು ರಾತ್ರಿ ಮತ್ತು ಹಗಲು ಫಲಿಸದ ಪ್ರಯತ್ನದ ನಂತರ, ಸೇನೆಯು ಕಮರಿಯಲ್ಲಿ ಸಿಕ್ಕಿಬಿದ್ದ ಯುವಕನನ್ನು ಕೇವಲ ಮೂರು ಗಂಟೆಗಳಲ್ಲಿ ಸುರಕ್ಷಿತವಾಗಿ ಕರೆತಂದಿತು. ಕಡಿದಾದ ಬೆಟ್ಟಗಳ ಮೂಲಕ ಸಾಗಿದ ಯೋಧರು ಬಾಬು ಅವರನ್ನು ರಕ್ಷಿಸಿದ್ದಾರೆ. ನಂತರ ಅವರಿಗೆ ಆಹಾರ ಮತ್ತು ನೀರು ನೀಡಿ ಮೇಲಕ್ಕೆ ಕರೆತರಲಾಯಿತು. ನಂತರ ಯುವಕನನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಆಸ್ಪತ್ರೆಗೆ ಸಾಗಿಸಲಾಯಿತು.
ಕೇರಳದ ಜನತೆ ಕಾತರದಿಂದ ಕಾಯುತ್ತಿದ್ದ ಕ್ಷಣಗಳವು. ಭರವಸೆಯನ್ನೇ ಕಳೆದುಕೊಂಡಿದ್ದ ಯುವಕನ ಬಳಿಗೆ ಸೇನೆ ಆತ್ಮವಿಶ್ವಾಸದಿಂದ ಬಂದಿತು. ಕೇರಳ ದಣಿದಿದ್ದಾಗ ಸದಾ ನೆರವಿಗೆ ಬಂದ ಸೈನಿಕರಿಗೆ ಜನತೆ ಧನ್ಯವಾದ ಅರ್ಪಿಸಿದರು.
https://fb.watch/b3pjAJ814m

