ಬದಿಯಡ್ಕ :ಎಡನೀರು ಶ್ರೀ ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಯವರ ತಾಂತ್ರಿಕ ಕ್ರಿಯೆಯಲ್ಲಿ ಇಂದು (ಮಾರ್ಚ್ 18 ) ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಲಿದೆ.
ಮಧ್ಯಾಹ್ನ 2.30 ರಿಂದ ಪೂಜೆ ಪ್ರಾರಂಭಗೊಳ್ಳಲಿದ್ದು ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಅವರಿಂದ ನವಾವರಣ' ಕೃತಿ ಆಲಾಪನೆ,ಸಂಜೆ 6.30 ರಿಂದ ಅಷ್ಟಾವಧಾನ ,ರಾತ್ರಿ 8.30 ಮಹಾಪೂಜೆ ಜರಗಲಿದೆ.ರಾತ್ರಿ 9.ರಿಂದ ವಿದುಷಿ ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ನೃತ್ಯಾರ್ಪಣಂ ಜರಗಲಿದ್ದು ,10.30 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಅವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜರಗಲಿದೆ.ಪೂಜಾ ಕಾರ್ಯದಲ್ಲಿ ಸಾರ್ವಜನಿಕರಿಗೆ ಅವಕಾಶವಿದ್ದು ಪೂಜೆಯ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.




