ತಿರುವನಂತಪುರಂ: ಕೆಎಸ್‌ಆರ್‌ಟಿಸಿಗೆ ತೈಲ ಕಂಪನಿಗಳು ಡೀಸೆಲ್ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿವೆ. ಒಂದೇ ದಿನದಲ್ಲಿ ಲೀಟರ್ ಗೆ 21 ರೂ.10 ಪೈಸೆ ಏರಿಕೆಯಾಗಿದೆ. ಬೃಹತ್ ಖರೀದಿ ವಿಭಾಗದಲ್ಲಿ ತೈಲ ಬೆಲೆ ಏರಿಕೆ ಮಾಡಲಾಗಿದೆ.
ಈ ಹಿಂದೆ ಐಒಸಿ ಪ್ರತಿ ಲೀಟರ್‌ಗೆ 7 ರೂ. ಹೆಚ್ಚಳಗೊಳಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು, ಆದರೆ ಕೋರ್ಟ್ ಹೈಕೋರ್ಟ್ ಮೊರೆ ಹೋಗುವಂತೆ ಆದೇಶ ನೀಡಿತ್ತು.
ಬೆಲೆ ಏರಿಕೆ ವಿರುದ್ಧ ಇಂದು ಹೈಕೋರ್ಟ್ ಮೊರೆ ಹೋಗುವುದಾಗಿ ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಬೆಲೆ ಏರಿಕೆ ಸ್ವೀಕಾರಾರ್ಹವಲ್ಲ ಮತ್ತು ಕೆಎಸ್‌ಆರ್‌ಟಿಸಿಯನ್ನು ನಷ್ಟಕ್ಕೆ ತಳ್ಳಲಿದೆ ಎಂದು ಸಚಿವರು ಹೇಳಿದರು.




