ಬದಿಯಡ್ಕ: ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್, ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಓಡಂಗಲ್ಲು ರೋಡ್, ವಿದ್ಯಾಗಿರಿ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಡಾ. ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಸೆಂಚುರಿ ಗ್ರೂಪ್ಸ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಓಡಂಗಲ್ಲು ರೋಡ್ ವಿದ್ಯಾಗಿರಿಯಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ಜರಗಿತು.
ವಾರ್ಡು ಸದಸ್ಯೆ ಶುಭಲತ ರೈ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾಡಿಗೆ ಜ್ಞಾನದ ಬೆಳಕನ್ನು ನೀಡಿದ ಸ್ವಾಮಿ ವಿವೇಕಾನಂದರ ಹೆಸರಿನ ಯುವಕರ ಸಂಘಟನೆಯು ಊರಿನ ಜನತೆಗೆ ಕಣ್ಣಿನ ಚಿಕಿತ್ಸೆಗಾಗಿ ನೆರವಾಗುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವು ಮಾದರಿಯಾಗಿದೆ. ಇಂತಹ ಇನ್ನಷ್ಟು ಜನರಿಗೆ ಉಪಯೋಗವಾಗುವ ಕಾರ್ಯಗಳಿಗೆ ಯುವಕರು ಹಾಗೂ ಸಂಘಟನೆಗಳು ಮುಂದೆ ಬಂದಾಗ ನಾಡು ಬೆಳಕನ್ನು ಕಾಣುತ್ತದೆ ಎಂದರು.
ಶ್ರೀ ಸತ್ಯಸಾಯಿ ಅಭಯ ನಿಕೇತ್‍ನ ಲತಾ ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೊಂಡು ಬಂದಿರುವ ನಾವು ಜನರೊಂದಿಗೆ ಸದಾ ಬೆರೆತು ಬಾಳಬೇಕು ಎಂಬ ನಿಟ್ಟಿನಲ್ಲಿ ಜನೋಪಯೋಗಿ ಕಾರ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದೇವೆ ಎಂದರು. ವಿವೇಕಾನಂದ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷ ರವಿರಾಜ ನಾಂದ್ರೋಡು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ತಾರಾನಾಥ ರೈ ಕಡಾರು, ಕ್ಲಬ್‍ನ ಕಾರ್ಯದರ್ಶಿ ರಂಜನಾಥ ಆಳ್ವ ಕಡಾರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್‍ನ ಸದಸ್ಯ ರತ್ನಾಕರ ಎಸ್.ಓಡಂಗಲ್ಲು ಸ್ವಾಗತಿಸಿ, ಅಭಯ ನಿಕೇತನ್‍ನ ಪ್ರೇಂಪ್ರಕಾಶ್ ವಂದಿಸಿದರು. 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

.jpg)
