HEALTH TIPS

ಕಾರುಗಳ ಮಾರಾಟ, ಸರ್ವಿಸ್ ಮಾಡಲು ಅನುಮತಿಸದ ಹೊರತು ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆ ಇಲ್ಲ: ಎಲಾನ್ ಮಸ್ಕ್

    ನವದೆಹಲಿ: ಭಾರತದಲ್ಲಿ ಟೆಸ್ಲಾ 'ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ'ವನ್ನು ಕಂಪನಿ ತೆರೆಯಲಿದೆ ಎಂಬುದರ ಕುರಿತು ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಈ ನಡುವಲ್ಲೇ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 

     ಟ್ವಿಟ್ಟರ್ ಬಳಕೆದಾರನೊಬ್ಬ ಮೇ 27 ರಂದು, ಎಲೋನ್ ಮಸ್ಕ್ ಅವರಿಗೆ, ಭವಿಷ್ಯದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನ ಭಾರತದಲ್ಲಿ ತಯಾರಿಸುತ್ತಿದೆಯೇ' ಎಂದು ಪ್ರಶ್ನಿಸಿದ್ದರು. 

    ಈ ಪ್ರಶ್ನೆಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿರುವ ಎಲಾನ್ ಮಸ್ಕ್ ಅವರು, ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು (ಇವಿ) ಉತ್ಪಾದನಾ ಕಂಪನಿಯು ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಮುಂದಿನ ದಿನಗಳಲ್ಲಿ ತೆರೆಯುವ  ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 

      ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ಒದಗಿಸಲು ನಮಗೆ ಮೊದಲು ಅನುಮತಿಸದ ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಿಲ್ಲ ಸ್ಪಷ್ಟಪಡಿಸಿದ್ದಾರೆ. 

      ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಹೇಳಿಕೆ ನೀಡಿದ್ದ ಎಲಾನ್ ಮಸ್ಕ್ ಅವರು, ದೇಶದಲ್ಲಿ ಆಮದು ಮಾಡಿಕೊಂಡ ವಾಹನಗಳೊಂದಿಗೆ ಟೆಸ್ಲಾ ಯಶಸ್ವಿಯಾದರೆ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದು ಎಂದು ಹೇಳಿದ್ದರು. 

     ಟೆಸ್ಲಾ ತನ್ನ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಯಸಿದೆ. ಆದರೆ, ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಆಮದು ಸುಂಕ ಅತ್ಯಧಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. 

    ಪ್ರಸ್ತುತ, ಭಾರತವು ಯುಎಸ್'ಡಿ 40,000 ಕ್ಕಿಂತ ಹೆಚ್ಚು ಸಿಐಎಫ್ (ವೆಚ್ಚ, ವಿಮೆ ಮತ್ತು ಸರಕು ಸಾಗಣೆ) ಮೌಲ್ಯದೊಂದಿಗೆ ಸಂಪೂರ್ಣವಾಗಿ ಆಮದು ಮಾಡಿಕೊಂಡ ಕಾರುಗಳ ಮೇಲೆ ಶೇ.100ರಷ್ಟು ಆಮದು ಸುಂಕವನ್ನು ವಿಧಿಸುತ್ತಿದೆ ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಕಾರುಗಳ ಮೇಲೆ ಶೇ.60ರಷ್ಟು ಆಮದು ಸುಂಕ ವಿಧಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries