ಕುಂಬಳೆ: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ತೃತೀಯ ದಿನ ಜರಗಿದ ಧಾರ್ಮಿಕ ಸಭೆಯಲ್ಲಿ ಮಹಿಳಾ ಮುಂದಾಳುಗಳು ಪ್ರಾತಿನಿಧ್ಯವಹಿಸಿರುವುದು ವಿಶೇಷವಾಗಿತ್ತು. ಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಈಶ್ವರಿ ಬೇರ್ಕಡವು ಧಾರ್ಮಿಕ ಭಾಷಣಗೈದು, ಗಂಡು ಹೆಣ್ಣೆಂಬ ಎರಡು ಬೇಧಗಳು ಜಗತ್ತಿನಲ್ಲಿ ಕಂಡು ಬಂದರೂ ಈ ಎರಡೂ ಒಂದರಿಂದ ಒಂದು ಅವಿನಾಭಾವ ಸಂಬಂಧ ಹೊಂದಿರುವುದರಿಂದಲೇ ಪುರಾಣ ಕಾಲದಿಂದಲೂ ಮಹತ್ವದ ಸ್ಥಾನ ಕಲ್ಪಿಸಿದ್ದಾರೆ. ಈ ನೆಲದಲ್ಲೂ ಇದು ಅನಾವರಣಗೊಂಡಿರುವುದಕ್ಕೆ ಈ ಮಹಿಳಾ ಧಾರ್ಮಿಕ ಸಭೆ ಸಾಕ್ಷಿಯಾಗಿದ್ದು. ಮಾತೃ ಹೃದಯಗಳು ಸಮಾಜವನ್ನು ತಿದ್ದಿ ತೀಡುವಲ್ಲಿ ಮಾದರಿಯಾಗಬೇಕು ಎಂದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕಿ ವೇದಾವತಿ, ಗೀತಾ ರಾಮಚಂದ್ರ ಪೆಜತ್ತಾಯ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ಸುಲೋಚನಾ ಉಮೇಶ್ , ಸಿಂಧೂ ಮನೋರಾಜ್ ಮಾಯಿಪ್ಪಾಡಿ, ಮಧೂರು ಗ್ರಾ.ಪಂ.ಸಿಡಿಎಸ್ ಉಪಾಧ್ಯಕ್ಷೆ ಶ್ರೀಲತಾ ಮಾಯಿಪ್ಪಾಡಿ ಮೊದಲಾದವರು ಪಾಲ್ಗೊಂಡಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ಶ್ಯಾಮಲ ಮಹಾಬಲ ಶೆಟ್ಟಿ ಸ್ವಾಗತಿಸಿ ಚಿತ್ರಾ ಆಶೋಕ್ ರೈ ವಂದಿಸಿದರು. ಕಾರ್ಯದರ್ಶಿ ಶ್ರೀಲತಾ ವಿಶಾಲಾಕ್ಷ ರೈ ಕಾರ್ಯಕ್ರಮ ನಿರೂಪಿಸಿದರು.




.jpg)
