ಕುಂಬಳೆ: ಕುದೆಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವು ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವೈಭವಯುತವಾಗಿ ಜರಗುತ್ತಿದ್ದು ದ್ವಿತೀಯ ದಿನ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂಗೀತ ಕಾರ್ಯಕ್ರಮ ಜನ ಮನ ರಂಜಿಸಿತು. ಬೆಳಿಗ್ಗೆ ಹರಿಕೃಷ್ಣ ಮನೋಳಿತ್ತಾಯ ಮತ್ತು ಚೈತ್ರ ಮನೋಳಿತ್ತಾಯ ಮಾಯಿಪ್ಪಾಡಿ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪೂರ್ವಾಹ್ನ ದಿವ್ಯ ಮಹೇಶ ಮತ್ತು ದಿಶಾ ಮಹೇಶ ಮನ್ನಿಪ್ಪಾಡಿ ಕಾಸರಗೋಡು ಇವರಿಂದ ಸಂಗೀತ ಕಾರ್ಯಕ್ರಮವು ಜರಗಿತ್ತು.




.jpg)
