HEALTH TIPS

ಮುತ್ತುಗಳ ದ್ವೀಪ ಬಹರೈನ್​ನಲ್ಲಿ ಮಣ್ಣು ತೂರುವ ಬಿರುಗಾಳಿಯನ್ನು ಭೇದಿಸಿ ಸದ್ಗುರು ಪ್ರವೇಶ: ಮಣ್ಣು ಉಳಿಸಿ ಅಭಿಯಾನ

           ಬಹರೈನ್​: ಸೌದಿ ಅರೇಬಿಯಾದ ರಿಯಾದ್​ನಲ್ಲಿ ಸಮಾರಂಭಗಳನ್ನು ಸರಣಿಯಲ್ಲಿ ಯಶಸ್ವಿಯಾಗಿ ನಡೆಸಿದ ನಂತರ ಸದ್ಗುರು, ಮಧ್ಯ ಪ್ರಾಚ್ಯ ದೇಶಗಳನ್ನು ಇನ್ನೂ ಒಳಹೊಕ್ಕು 'ಮುತ್ತುಗಳ ದ್ವೀಪ' ಎಂದೇ ಪ್ರಸಿದ್ಧವಾಗಿರುವ ಬಹರೈನ್ ತಲುಪಿ, ಅಲ್ಲಿಯೂ ಮಣ್ಣು ರಕ್ಷಣೆ ಅಭಿಯಾನ ನಡೆಸಿದ್ದಾರೆ.

          ಅದರಲ್ಲೂ ಸಂಜೆ 4.30ರಿಂದ ಮಧ್ಯರಾತ್ರಿ 12.30ರ ವರೆಗೂ ಸತತವಾಗಿ ಬೈಕ್​ ಸವಾರಿ ಮಾಡಿ ಅವರು ಬಹರೈನ್ ತಲುಪಿದರು.

             ಅಸಾಮಾನ್ಯ ಶೀತ, ಮಳೆ ಮತ್ತು ಹಿಮವನ್ನು ಯೂರೋಪಿನಲ್ಲಿ ಎದುರಿಸಿದ ಅವರನ್ನು ಮಧ್ಯ ಪ್ರಾಚ್ಯ ಪ್ರದೇಶ ನಿರೀಕ್ಷಿಸಿದಂತೆಯೇ ಮಣ್ಣು ತೂರುವ ಬಿರುಗಾಳಿಗಳನ್ನು ಒಡ್ಡಿ ಸ್ವಾಗತಿಸಿತು. ರಿಯಾದ್​ನಿಂದ ಹೊರಟ ಸದ್ಗುರು, ಪ್ರತಿ ಗಂಟೆಗೆ 65 ಕಿ.ಮೀ. ವೇಗದಲ್ಲಿ ಬೈಕಿನ ಮುಂದಿನ ಚಕ್ರ ಅಪಾಯಕಾರಿಯಾಗಿ ಅಲುಗಾಡುವಂತೆ ಮಾಡುತ್ತಿದ್ದ ಗಾಳಿಯನ್ನು ಭೇಧಿಸಿ ಪ್ರಯಾಣ ಮಾಡಬೇಕಾಯಿತು.


         ಸುಪ್ರೀಂ ಕೌನ್ಸಿಲ್ ಫಾರ್ ಎನ್​ವಿರಾನ್​ಮೆಂಟ್​ನ ಸಿಇಒ ಡಾ. ಮೊಹಮ್ಮದ್ ಮುಬಾರಕ್ ಬಿನ್ ಡೈನಾ, ಬಹರೈನಿನ ಸಂಸ್ಕೃತಿ ಮತ್ತು ಪ್ರಾಚೀನತೆಯ ಅಧಿಕಾರ ಸಂಸ್ಥೆಯ ಸಂಸ್ಕೃತಿ ಮತ್ತು ಕಲಾ ಡೈರೆಕ್ಟರ್ ಶೇಖ್ ಹಾಲ ಮತ್ತು ಬಹರೈನಲ್ಲಿರುವ ಭಾರತದ ರಾಯಭಾರಿಗಳಾದ ಪಿಯೂಷ್ ಶ್ರೀವಾಸ್ತವ ಅವರನ್ನು ಬಹರೈನ್ ಕೋಟೆ, ಮನಾಮದಲ್ಲಿ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಚರ್ಚಿಸಲೆಂದು ಭೇಟಿ ಮಾಡುವ ಮೂಲಕ ಸದ್ಗುರು ಅಲ್ಲಿನ ನಿಶ್ಚಿತ ಕಾರ್ಯಕ್ರಮಗಳನ್ನು ಆರಂಭಿಸಿದರು.

           ಭಾರತೀಯ ರಾಯಭಾರ ಕಚೇರಿಯಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ಸದ್ಗುರು, ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿದರು, ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಸಿ ನೆಡುವ ಕಾರ್ಯಕಮದ ನಂತರ , ರಾಯಭಾರ ಕಚೇರಿಯಲ್ಲಿ ಸದ್ಗುರು ಪ್ರಮುಖ ಉದ್ಯಮಿಗಳನ್ನು ಮತ್ತು ಇತರ ರಾಯಭಾರಿಗಳನ್ನು ಭೇಟಿ ಮಾಡಿ, ಅಭಿಯಾನದ ಬಗ್ಗೆ ಚರ್ಚಿಸಿದರು.

          100 ದಿನಗಳ ಕಾಲ ಏಕಾಂಗಿಯಾಗಿ 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ಬೈಕ್​ ಸವಾರಿಯ ಮಣ್ಣು ರಕ್ಷಣೆ ಅಭಿಯಾನದ 56ನೇ ದಿನದಂದು ಸದ್ಗುರು ಮನಾಮದ ಬಹರೈನ್ ನ್ಯಾಷನಲ್ ಮ್ಯೂಸಿಯಮ್​ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿಯಾನದ ಬಗ್ಗೆ ಅರಿವನ್ನು ಪ್ರಚಾರ ಪಡಿಸಿದರು.
             ಬಹರೈನಿನ ಸಂಸ್ಕೃತಿ ಮತ್ತು ಪ್ರಾಚೀನತೆಯ ಅಧಿಕಾರ ಸಂಸ್ಥೆಯ ಸಂಸ್ಕೃತಿ ಮತ್ತು ಕಲಾ ಡೈರೆಕ್ಟರ್ ಆದ ಶೇಖ್ ಹಾಲ ಮತ್ತು ಬಹರೈನಲ್ಲಿರುವ ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ ಅವರು ಮಣ್ಣು ಉಳಿಸಸುವುದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

              ಬುದ್ಧ ಪೌರ್ಣಮಿಯ ಹಿಂದಿನ ದಿನವಾಗಿದ್ದು, ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸದ್ಗುರು, ಆ ದಿನದ ಪ್ರಾಮುಖ್ಯತೆಯನ್ನು ನೆನೆಪಿಸುವುದರ ಮೂಲಕ ತಮ್ಮ ಮಾತನ್ನು ಆರಂಭಿಸಿ, ಗೌತಮ ಬುದ್ಧನ ಜ್ಞಾನೋದಯದ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಮಣ್ಣಿನ ಸತ್ವದ ನಿರ್ನಾಮದ ದುರಂತ ಪರಿಣಾಮಗಳ ಬಗ್ಗೆ ಮಾತನಾಡುತ್ತ ಸದ್ಗುರು, ನಿರ್ಜೀವ ಮಣ್ಣಿನ ಕಾರಣದಿಂದ ಬಲವಂತವಾಗಿ ವಲಸೆ ಹೋಗಬೇಕಾದ ಪರಿಸ್ಥಿತಿಯಲ್ಲಿ, ಹೆಂಗಸರು ಮತ್ತು ಮಕ್ಕಳ ಮೇಲೆ ಎಂತಹ ವಿನಾಶಕಾರಿ ಫಲಿತಾಂಶಗಳು ಉಂಟಾಗುತ್ತವೆ ಎಂದು ವಿವರಿಸಿದರು.            ಫಲವತ್ತಾದ ಭೂಮಿಗಾಗಿ ನಡೆದ ಸುಡಾನ್ ಯುದ್ಧವನ್ನು ನೆನಪಿಸಿ, ಅದರಲ್ಲಿ ಮಡಿದ 2,60,000 ಜನರಲ್ಲಿ ಅರ್ಧದಷ್ಟು ಆರು ವರ್ಷಗಳಿಗೂ ಕಡಿಮೆ ವಯಸ್ಸಿನ ಮಕ್ಕಳೇ ಆಗಿದ್ದರು ಎಂದು ಹೇಳುತ್ತ, ಜನಸಂಖ್ಯೆಯು ದುರ್ಬಲ ವರ್ಗದ ಮೇಲೆ ಎಂಥ ಭೀಕರ ಪರಿಣಾಮ ಆಗುತ್ತದೆ ಎನ್ನುವುದನ್ನು ಪ್ರತಿಬಿಂಬಿಸಿದರು. ಬಲವಂತವಾಗಿ ವಲಸೆ ಹೋಗಬೇಕಾದ ಪರಿಸ್ಥಿತಿಯಲ್ಲಿ, ಹೆಂಗಸರು ಮತ್ತು ಮಕ್ಕಳ ಮೇಲೆ ಇಂತಹ ವಿನಾಶಕಾರಿ ಫಲಿತಾಂಶಗಳು ಇರಬೇಕಾದರೆ, ಪ್ರಪಂಚದ ಹೆಂಗಸರು ಪಣ ತೊಟ್ಟು, ಹೀಗೆ ಆಗುವುದನ್ನು ತಡೆಗಟ್ಟಬೇಕು ಎಂದೂ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries