HEALTH TIPS

ಯೋಗ, ಆಯುರ್ವೇದವನ್ನು ಯಾವುದೋ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಯೋಜಿಸುವುದು ದುರದೃಷ್ಟಕರ: ಕೋವಿಂದ್

     ಭೋಪಾಲ್: ಆಯುರ್ವೇದ ಮತ್ತು ಯೋಗವನ್ನು ಯಾವುದೋ ಒಂದು ನಿರ್ದಿಷ್ಟ ಧರ್ಮ ಅಥವಾ ಸಮುದಾಯದೊಂದಿಗೆ ಸಂಯೋಜಿಸುವುದು ದುರದೃಷ್ಟಕರ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

     ರಾಷ್ಟ್ರಪತಿ ಕೋವಿಂದ್ ಅವರು ಆರೋಗ್ಯ ಭಾರತಿ ಆಯೋಜಿಸಿದ್ದ `ಒಂದು ರಾಷ್ಟ್ರ ಒಂದು ಆರೋಗ್ಯ ವ್ಯವಸ್ಥೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಭಾರತಿಯು ನಾಗರಿಕರನ್ನು ಆರೋಗ್ಯವಂತರನ್ನಾಗಿ ಮಾಡಲು ಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಶ್ಲಾಘಿಸಿದರು.

     ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿದ್ದರೆ, ಎಲ್ಲಾ ಕುಟುಂಬಗಳು ಆರೋಗ್ಯವಾಗಿರುತ್ತವೆ. ಪ್ರತಿಯೊಂದು ಕುಟುಂಬವೂ ಆರೋಗ್ಯವಾಗಿದ್ದರೆ ಪ್ರತಿ ಗ್ರಾಮ ಮತ್ತು ಪ್ರತಿ ನಗರವೂ ಮತ್ತು ಇಡೀ ದೇಶವು ಆರೋಗ್ಯವಾಗಿರುತ್ತದೆ ಎಂದು ಕೋವಿಂದ್ ಹೇಳಿದರು.

     2017ರಲ್ಲಿ ಘೋಷಿಸಲಾದ ರಾಷ್ಟ್ರೀಯ ಆರೋಗ್ಯ ನೀತಿಯ ಅಡಿಯಲ್ಲಿ, ಸರ್ಕಾರವು ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮತ್ತು ಎಲ್ಲರಿಗೂ ಆರೋಗ್ಯ ಸೌಲಭ್ಯಗಳನ್ನು ಸಮಗ್ರ ರೀತಿಯಲ್ಲಿ ವ್ಯವಸ್ಥೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅವರು ಹೇಳಿದರು.

      ಈ ಗುರಿಗಳನ್ನು ಸಾಧಿಸಲು, ಸಮಾಜದ ಎಲ್ಲಾ ವರ್ಗಗಳ, ವಿಶೇಷವಾಗಿ ಜಾಗೃತ ನಾಗರಿಕರ ಸಹಕಾರ ಮತ್ತು ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಹಭಾಗಿತ್ವವು ಅತ್ಯಗತ್ಯ ಎಂದು ಅವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries