HEALTH TIPS

World Thyroid Day: ಥೈರಾಯ್ಡ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು, ಹಾಗಾದರೆ ಸತ್ಯಾಂಶಗಳೇನು ಗೊತ್ತಾ?

 ಮೇ 25 ವಿಶ್ವ ಥೈರಾಯ್ಡ್ ದಿನ. ಈ ದಿನ ಥೈರಾಯ್ಡ್ ಬಗ್ಗೆ ಇರುವ ಕೆಲ ತಪ್ಪು ಕಲ್ಪನೆಗಳ ಬಗ್ಗೆ ತಿಳಿಯೋಣ, ಅದಕ್ಕಿಂತ ಮುಂಚೆ ಥೈರಾಯ್ಡ್ ಬಗ್ಗೆ ವಿವರವಾಗಿ ತಿಳಿಯೋಣ:

ಥೈರಾಯ್ಡ್‌ ಗ್ರಂಥಿ ಎಂಬುವುದು ನಮ್ಮ ದೇಹದ ಗಂಟಲಿನ ಭಾಗದಲ್ಲಿರುವ ಅಂಗ. ಇದು ಉತ್ಪಾದಿಸುವ ಥೈರಾಯ್ಡ್ ಹಾರ್ಮೋನ್‌ಗಳು ದೇಹದ ಇತರ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಿಲು ತುಂಬಾನೇ ಮುಖ್ಯ. ಥೈರಾಯ್ಡ್‌ ಗ್ರಂಥಿ ಉತ್ಪಾದಿಸುವ ಥೈರಾಯ್ಡ್‌ ಹಾರ್ಮೋನ್‌ಗಳನ್ನು T3,T4,TSH ಎಂದು ಕರೆಯಲಾಗುವುದು.

ಈ ಹಾರ್ಮೋನ್‌ ಉತ್ಪಾದನೆಯಲ್ಲಿ ವ್ಯತ್ಯಾಸವಾದರೆ ಅದರ ಪರಿಣಾಮ ನಮ್ಮ ದೇಹದ ಮೇಲಾಗುವುದು. ಥೈರಾಯ್ಡ್‌ ಹಾರ್ಮೋನ್‌ ಸಮಸ್ಯೆಗಳನ್ನು ಹೈಪೋಥೈರಾಯ್ಡ್ ಹಾಗೂ ಹೈಪರ್‌ಥೈರಾಯ್ಡ್ ಎಂದು ಕರೆಯಲಾಗುವುದು.

ಥೈರಾಯ್ಡ್‌ ಹಾರ್ಮೋನ್‌ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್‌ ಉಂಟಾಗುವುದು, ಥೈರಾಯ್ಡ್‌ ಹಾರ್ಮೋನ್‌ ಓವರ್‌ ಆ್ಯಕ್ಟಿವ್‌ ಆದರೆ ಅದನ್ನು ಹೈಪರ್‌ ಥೈರಾಯ್ಡ್ ಎಂದು ಕರೆಯಲಾಗುವುದು.

ಹೈಪೋಥೈರಾಯ್ಡ್ ಸಮಸ್ಯೆ ಉಂಟಾದರೆ ವಿಪರೀತಿ ದಪ್ಪಗಾಗುತ್ತಾರೆ, ಹೈಪರ್‌ ಥೈರಾಯ್ಡ್‌ ಸಮಸ್ಯೆ ಉಂಟಾದರೆ ತುಂಬಾ ಸಣ್ಣಗಾಗುತ್ತಾರೆ,ಜೊತೆಗೆ ಬಂಜೆತನ, ಕ್ಯಾನ್ಸರ್ ಮುಂತಾದ ಅಪಾಯಕಾರಿ ಸಮಸ್ಯೆಗಳು ಬರಬಹುದು, ಆದ್ದರಿಂದ ಥೈರಾಯ್ಡ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಥೈರಾಯ್ಡ್ ಕಾಯಿಲೆ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಜನರಲ್ಲಿವೆ, ನಾವು ಈ ಲೇಖನದಲ್ಲಿ ಅದರ ಬಗ್ಗೆ ವಿವರವಾಗಿ ಹೇಳಿದ್ದೇವೆ ನೋಡಿ:

1. ತಪ್ಪು ಕಲ್ಪನೆ: ಹೈಪೋಥೈರಾಯ್ಡ್‌ ಮಧ್ಯ ವಯಸ್ಸಿನ ನಂತರ ಬರುವ ಕಾಯಿಲೆಯಾಗಿದೆ

ಸತ್ಯಾಂಶ: ಹೈಪೋಥೈರಾಯ್ಡ್‌ ಯಾವುದೇ ವಯಸ್ಸಿನಲ್ಲಿ ಬರಬಹುದು. ಕೆಲವರಿಗೆ ತುಂಬ ಚಿಕ್ಕ ಪ್ರಾಯದಲ್ಲಿ ಬರುತ್ತದೆ. ಅಲ್ಲದೆ ಹೈಪೋಥೈರಾಯ್ಡ್ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಬರುತ್ತದೆ. ಹೈಪೋಥೈರಾಯ್ಡ್‌ ಯವನ ಪ್ರಾಯದಲ್ಲಿಯೇ ಕೆಲವರಲ್ಲಿ ಕಂಡು ಬರಬಹುದು.

2. ತಪ್ಪು ಕಲ್ಪನೆ: ಥೈರಾಯ್ಡ್‌ ಸಮಸ್ಯೆ ಬಂದವರಿಗೆಲ್ಲಾ ಗಳಗಂಡ ರೋಗ (ಗ್ವಾಯಟರ್) ಬರುತ್ತದೆ .

ಸತ್ಯಾಂಶ: ಹಾಗೇನು ಇಲ್ಲ, ಕೆಲವರಿಗೆ ಗಂಟಲಿನ ಭಾಗದಲ್ಲಿ ಊತ ಅಥವಾ ಗಳಗಂಡ ರೋಗ ಉಂಟಾಗುವುದು, ಕೆಲ ಥೈರಾಯ್ಡ್‌ ರೋಗಿಗಳಲ್ಲಿ ಗಂಟಲು ಸಹಜವಾಗಿಯೇ ಇರುತ್ತದೆ.

3. ತಪ್ಪುಕಲ್ಪನೆ 3: TSH ನಾರ್ಮಲ್ ಆದ ಬಳಿಕ ಮಾತ್ರೆ ಸೇವನೆ ನಿಲ್ಲಿಸಬಹುದು

ಸತ್ಯಾಂಶ:ನೀವು ಔಷಧಿ ಅಥವಾ ಮಾತ್ರೆ ತೆಗೆದುಕೊಂಡಾಗ ನಿಮ್ಮ TSH ನಾರ್ಮಲ್ ಅನಿಸುವುದು. ಆದರೆ ಸಾಮಾನ್ಯವಾಗಿ ತುಂಬಾ ರೋಗಿಗಳು ಜೀವನಪೂರ್ತಿ ಮಾತ್ರೆ ಸೇವಿಸಬೇಕು.

ನೀವು ವೈದ್ಯರ ಸಲಹೆ ಇಲ್ಲದೆ ಸ್ವಇಚ್ಛೆಯಿಂದ ಮಾತ್ರೆ ತೆಗೆಯುವುದನ್ನು ನಿಲ್ಲಿಸಬಾರದು.

4.ತಪ್ಪು ಕಲ್ಪನೆ: ಹೈಪೋಥೈರಾಯ್ಡ್‌ ಅನ್ನು ಆಹಾರಕ್ರಮದಿಂದ ಹೋಗಲಾಡಿಸಬಹುದು ಸತ್ಯಾಂಶ: ಬರೀ ಆಹಾರಕ್ರಮದಿಂದ ಹೈಪೋಥೈರಾಯ್ಡ್‌ ಸಮಸ್ಯೆಯಿಂದ ಗುಣಮುಖರಾಗಲು ಸಾಧ್ಯವಿಲ್ಲ, ನೀವು ಮಾತ್ರೆ ಸೇವಿಸಲೇಬೇಕು, ಆದರೆ ಆರೋಗ್ಯಕರ ಆಹಾರಕ್ರಮ ನಿಮ್ಮ ಸಮಸ್ಯೆಯನ್ನು ಬೇಗನೆ ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.

5. ತಪ್ಪು ಕಲ್ಪನೆ: ಗಂಟಲಿನಲ್ಲಿ ಗಡ್ಡೆ ಉಂಟಾದರೆ ಅದು ಕ್ಯಾನ್ಸರ್ ಸತ್ಯಾಂಶ: ಗಂಟಲಿನಲ್ಲಿ ಉಂಟಾಗುವ ಗಡ್ಡೆ ಎಲ್ಲರಿಗೂ ಕ್ಯಾನ್ಸರ್‌ ರೋಗ ತರುವುದಿಲ್ಲ, ಆದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ ಮುಂದೆ ಕ್ಯಾನ್ಸರ್ ಆಗಬಹುದು.

6. ಥೈರಾಯ್ಡ್ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿಲ್ಲ ತುಂಬಾ ಥೈರಾಯ್ಡ್‌ ಕ್ಯಾನ್ಸರ್‌ಗಳಲ್ಲಿ ಆರಂಭದಲ್ಲಿಯೇ ಪತ್ತೆಯಾದ ಕಾರಣ ಗುಣಮುಖರಾಗಿದ್ದಾರೆ. ಥೈರಾಯ್ಡ್‌ ಸರ್ಜರಿ ಅಥವಾ ರೇಡಿಯೋ ಅಯೋಡಿಯನ್‌ ಟ್ರೀಟ್ಮೆಂಟ್‌ ಮೂಲಕ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು.

7. ತಪ್ಪು ಕಲ್ಪನೆ: ಹೈಪೋಥೈರಾಯ್ಡ್ ಸಮಸ್ಯೆಯಿದ್ದರೆ ಗರ್ಭಿಣಿಯಾಗಲು ಸಾಧ್ಯವಿಲ್ಲ ಸತ್ಯಾಂಶ: ಹೈಪೋಥೈರಾಯ್ಡ್ ಅನ್ನು ನಿಯಂತ್ರಣಕ್ಕೆ ತಂದ ಮೇಲೆ ಗರ್ಭಧಾರಣೆಗೆ ಪ್ಲ್ಯಾನ್‌ ಮಾಡಬಹುದು ಆದರೆ ಗರ್ಭಾವಸ್ಥೆಯ ಅವಧಿಯಲ್ಲಿ ಪ್ರತಿ ತಿಂಗಳು ನೀವು ನಿಮ್ಮ ಥೈರಾಯ್ಡ್‌ ಪರೀಕ್ಷೆ ಮಾಡಬೇಕು ಹಾಗೂ ತಜ್ಞರು ಮಾನಿಟರ್‌ ಮಾಡಬೇಕಾಗುತ್ತದೆ.

8. ತಪ್ಪು ಕಲ್ಪನೆ: ಗಳಗಂಡ ರೋಗಕ್ಕೆ ಸರ್ಜರಿ ಮಾಡಿಸಲೇಬೇಕು ಸತ್ಯಾಂಶ: ಹಾಗೇನಿಲ್ಲ ಸರ್ಜರಿ ಕೆಲವೊಂದು ಸಂದರ್ಭದಲ್ಲಿ ಮಾತ್ರ ಬೇಕಾಗುತ್ತದೆ. ಗ್ವಾಯಟರ್‌ನಿಂದಾಗಿ ನುಂಗಲು, ಉಸಿರಾಡಲು ಕಷ್ಟವಾದರೆ ಸರ್ಜರಿ ಬೇಕಾಗುತ್ತದೆ. ವೈದ್ಯರು ನಿಮ್ಮ ದೇಹದ ಸ್ಥಿತಿ ನೋಡಿ ನಿಮಗೆ ಸರ್ಜರಿ ಅವಶ್ಯಕತೆ ಇದೆಯೇ, ಇಲ್ಲವೇ ಎಂಬುವುದನ್ನು ತಿಳಿಸುತ್ತಾರೆ.

9. ತಪ್ಪು ಕಲ್ಪನೆ: ತೂಕ ವ್ಯತ್ಯಾಸವಾದರೆ ಅದು ಥೈರಾಯ್ಡ್ ಸತ್ಯಾಂಶ: ಬರೀ ಥೈರಾಯ್ಡ್‌ ಸಮಸ್ಯೆ ಇದ್ದಾಗ ಮಾತ್ರವಲ್ಲ ಇತರ ಸಮಸ್ಯೆಗಳಿಂದಾಲೂ ತೂಕದಲ್ಲಿ ಬಾರೀ ವ್ಯತ್ಯಾಸ ಕಂಡು ಬರಬಹುದು. ನಿಮ್ಮ ದೇಹದ ತೂಕದಲ್ಲಿ ವ್ಯತ್ಯಾಸವಾದರೆ ಸೂಕ್ತ ಪರೀಕ್ಷೆ ಮಾಡಿಸಿ ಕಾರಣ ತಿಳಿದುಕೊಳ್ಳಿ.

10. ತಪ್ಪು ಕಲ್ಪನೆ: ಥೈರಾಯ್ಡ್‌ ಸಮಸ್ಯೆಯಿದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು ಸತ್ಯಾಂಶ: ಕೆಲವೊಂದು ಸಪ್ಲಿಮೆಂಟ್‌ ಹಾಗೂ ಆಹಾರಗಳು ನಿಮ್ಮ ಥೈರಾಯ್ಡ್ ಔಷಧಿ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಆಹಾರಕ್ರಮದ ಬಗ್ಗೆ ತಜ್ಞರಿಂದ ಸಲಹೆ ಪಡೆಯಿರಿ.

11. ತಪ್ಪು ಕಲ್ಪನೆ: ಥೈರಾಯ್ಡ್‌ ಸಮಸ್ಯೆಯ ಲಕ್ಷಣಗಳು ಗೋಚರಿಸುತ್ತದೆ ಸತ್ಯಾಂಶ: ಥೈರಾಯ್ಡ್‌ ಸಮಸ್ಯೆವಾದಾಗ ಅದರ ಲಕ್ಷಣಗಳು ಗಂಟಲಿನಲ್ಲಿ ಗಂಡು ಬರುತ್ತದೆ, ಆದರೆ ಕೆಲವರಿಗಷ್ಟೇ ಗಂಟಲಿನಲ್ಲಿ ಊತ ಕಂಡುಬರುವುದು. ಇನ್ನು ಕೆಲವರಿಗೆ ಏನೂ ಗೊತ್ತಾಗುವುದಿಲ್ಲ, ರೋಗಿಗೆ ಕೆಲವೊಂದು ಸಮಸ್ಯೆಗಳಾದಾಗ ಉದಾಹರಣೆಗೆ ಗರ್ಭಧಾರಣೆಗೆ, ಅನಿಯಮಿತ ಮುಟ್ಟು ಈ ರೀತಿಯಾದಾಗ ಪರೀಕ್ಷೆ ಮಾಡಿದರೆ ತಿಳಿಯುತ್ತದೆ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries