HEALTH TIPS

ಇಂಧನ ತೆರಿಗೆ ತೆರೆಮರೆ ಲೆಕ್ಕ..

           ಕೇಂದ್ರ ಸರ್ಕಾರ ಇತ್ತೀಚೆಗೆ ಇಂಧನ ಮೇಲಿನ ಅಬಕಾರಿ ತೆರಿಗೆ ಇಳಿಸಿದ ವಿದ್ಯಮಾನ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಈ ಕ್ರಮದಿಂದ ರಾಜ್ಯಗಳ ಆದಾಯದ ಮೇಲೆ ಹೊಡೆತ ಬೀಳುತ್ತದೆ ಎಂಬ ವಿಚಾರ ಚರ್ಚೆಗೆ ಬಂತು.

           ತಮಿಳುನಾಡು ಹಣಕಾಸು ಸಚಿವ ಡಾ.ಪಿ.ತಿಯಗ ರಾಜನ್ ಈ ಕುರಿತು ಟ್ವೀಟ್ ಮಾಡಿದ್ದು ಗಮನಸೆಳೆಯಿತು. ಅದರಲ್ಲಿ ಅವರು ಉಲ್ಲೇಖಿಸಿದ್ದು ಇಷ್ಟು- 'ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸಿದರೆ ರಾಜ್ಯಕ್ಕೆ ಆದಾಯ ನಷ್ಟವಾಗುತ್ತದೆ. ಕೇಂದ್ರ ತೆರಿಗೆಯ ಮೇಲೆ ರಾಜ್ಯದಲ್ಲಿ ಇಂಧನ ಮಾರಾಟ ತೆರಿಗೆ ಅವಲಂಬಿತವಾಗಿರುವುದು ಇದಕ್ಕೆ ಕಾರಣ'. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಇಂಧನ ತೆರಿಗೆ ಲೆಕ್ಕಾಚಾರದ ಸಂಕ್ಷಿಪ್ತ ವಿವರ ಇಲ್ಲಿದೆ.

                                   ಅಬಕಾರಿ ಸುಂಕ ಪರಿಷ್ಕರಣೆ

             ಹಣದುಬ್ಬರ ಪ್ರಮಾಣ ಏರದಂತೆ ತಡೆಯಲು ಇಂಧನ ದರ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಇಳಿಸಿದೆ. ಪೆಟ್ರೋಲ್ ಲೀಟರ್ ಮೇಲೆ 8 ರೂಪಾಯಿ, ಡೀಸೆಲ್ ಲೀಟರ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆಯಾಗಿದೆ. ಜತೆಗೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಕೂಡ ಇಳಿಕೆಯಾಗಿದೆ. ಅಬಕಾರಿ ಸುಂಕದಲ್ಲಿ ರಾಜ್ಯಕ್ಕೆ ಪ್ರತಿ ಲೀಟರ್​ನಲ್ಲಿ 1.4 ರೂಪಾಯಿ ಮಾತ್ರ ಸಲ್ಲುತ್ತದೆ. ಸೆಸ್ ಮತ್ತು ಇತರ ತೆರಿಗೆಗಳು ರಾಜ್ಯಗಳಿಗೆ ಸಲ್ಲುವುದಿಲ್ಲ. ಇದಕ್ಕೆ ಸಂಬಂಧಿಸಿದ ತೆರಿಗೆ ಲೆಕ್ಕ ಹೀಗಿದೆ.


                               ರಾಜ್ಯಗಳ ಮೇಲೆ ಪರಿಣಾಮ

           ರಾಜ್ಯ ತೆರಿಗೆ ಸಂಗ್ರಹದ ಮೇಲೆ ಆಗುವ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ದೆಹಲಿಯ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ. ದೆಹಲಿಯಲ್ಲಿ ಮಾರಾಟ ತೆರಿಗೆ ಶೇಕಡ 19.4 ಇದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದ್ದರ ಪರಿಣಾಮ, ದೆಹಲಿ ವ್ಯಾಟ್​ನಲ್ಲಿ ಪೆಟ್ರೋಲ್ ಲೀಟರಿಗೆ 0.83 ರೂ.ವಿನಾಯಿತಿ ನೀಡಿದೆ.

                                        ವಿವಿಧ ರಾಜ್ಯಗಳ ವ್ಯಾಟ್ ಲೆಕ್ಕ

               ದೆಹಲಿ ಮಾದರಿಯಲ್ಲೇ ವಿವಿಧ ರಾಜ್ಯಗಳಲ್ಲಿ ಕೂಡ ವ್ಯಾಟ್ ಇದೆ. ಇಲ್ಲಿ ಕೇಂದ್ರ ಅಬಕಾರಿ ತೆರಿಗೆ ಫಿಕ್ಸೆಡ್ ಆಗಿದ್ದು, ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಕೆಲವು ರಾಜ್ಯಗಳು ಸೆಸ್, ಹೆಚ್ಚುವರಿ ತೆರಿಗೆಗಳನ್ನೂ ವಿಧಿಸುತ್ತಿವೆ. ಇವುಗಳ ವಿವರ ಇಲ್ಲಿದೆ.

ಮಾಹಿತಿ - ಪಿಪಿಎಸಿ, ಸಿಎಜಿ, ಐಒಸಿಎಲ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries