ಬದಿಯಡ್ಕ: ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಶುಕ್ರವಾರ ಬೆಳಿಗ್ಗೆ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಪ್ರಸಿದ್ಧ ಜ್ಯೋತಿಷಿ ಇರ್ವಳಕುಡ ಪದ್ಮನಾಭ ಶರ್ಮ ಹಾಗೂ ಕ್ಷೇತ್ರದ ಪದಾಧಿಕಾರಿಗಳು ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರು ಹಾಗೂ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ ಮಾಸ್ತರ್ ಬೇಳ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಬ್ಬಾರ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಕ್ಷೇತ್ರದ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ವ್ಯವಸ್ಥಾಪಕರಾದ ಹರಿಕೃಷ್ಣ, ರಾಮಚಂದ್ರ ಶಾಸ್ತ್ರಿ, ಜಯಪ್ರಸಾದ್ ಆಳ್ವ, ರಾಜೇಶ್ ಹೊಳ್ಳ, ಪ್ರಕಾಶ್, ಪ್ರಶಾಂತ್, ಶ್ರೀಕೃಷ್ಣ ಭಟ್, ಶಿವಕುಮಾರ್, ಪ್ರಸನ್ನ, ನಿರ್ಮಲಾ, ವಿಜಯ ಕುಮಾರ್, ಶೀನ ಶೆಟ್ಟಿ, ರಾಮ, ಕೃಷ್ಣ ಹಾಗೂ ವೆಂಕಟರಮಣ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲದೆ, ಶಾಸಕ ಕೆ. ನೀಲಕಂಠನ್, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ., ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಪ್ಪ ಮಂಜೇಶ್ವರ, ಸೋಮಶೇಖರ ಜೆ.ಎಸ್., ಮಾಹಿನ್ ಕೇಳೋಟ್, ಶ್ಯಾಮಪ್ರಸಾದ್ ಮಾನ್ಯ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

.jpg)
.jpg)
.jpg)
.jpg)
