ನವದೆಹಲಿ :'ಅತ್ಯಾಧುನಿಕ ಜಿಸ್ಯಾಟ್-24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು' ಎಂದು ಇಸ್ರೊ ತಿಳಿಸಿದೆ.
0
samarasasudhi
ಜೂನ್ 23, 2022
ನವದೆಹಲಿ :'ಅತ್ಯಾಧುನಿಕ ಜಿಸ್ಯಾಟ್-24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು' ಎಂದು ಇಸ್ರೊ ತಿಳಿಸಿದೆ.
ಇಸ್ರೊ ನಿರ್ಮಿತ ಈ ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಉಡಾವಣೆ ಮಾಡಿದೆ.
'ಈ ಉಪಗ್ರಹವನ್ನು ಡಿಟಿಎಚ್ ಸೇವೆ ನೀಡುವ ಟಾಟಾ ಪ್ಲೇ ಕಂಪನಿಗೆ ಲೀಸ್ ನೀಡಲಾಗಿದೆ. 24-ಕೆಯು ಬ್ಯಾಂಡ್ ಸಂವಹನ ಉಪಗ್ರಹವಾಗಿರುವ ಜಿಸ್ಯಾಟ್-24ನ ಒಟ್ಟು ತೂಕ 4,180 ಕೆ.ಜಿ' ಎಂದು ಇಸ್ರೊ ತಿಳಿಸಿದೆ.
'ಇಸ್ರೊದ ಅಂಗಸಂಸ್ಥೆಯಾದ ಎನ್‌ಎಸ್‌ಐಎಲ್‌ಗೆ ಇಂದು ಮಹತ್ವದ ದಿನ. ಡಿಟಿಎಚ್ ಸೇವೆ ನೀಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ' ಎಂದು ಇಸ್ರೊ ಮುಖ್ಯಸ್ಥ ಡಾ.ಎಸ್.ಸೋಮನಾಥ್ ಹೇಳಿದ್ದಾರೆ.
2019ರಲ್ಲಿ ಎನ್‌ಎಸ್‌ಐಎಲ್ ಸ್ಥಾಪಿಸಲಾಗಿದೆ. ಸಂಸ್ಥೆಯು ಉಪಗ್ರಹಗಳ ನಿರ್ಮಾಣ, ಉಡಾವಣೆ ಹಾಗೂ ಅವುಗಳ ನಿರ್ವಹಣೆ ಮಾಡುತ್ತದೆ.