ಕುಂಬಳೆ: ಕಾಸರಗೋಡಿನ ಯುವ ಪತ್ರಕರ್ತ, ದಿ. ಮುತ್ತಲಿಬ್ ಅವರ ಸ್ಮರಣಾರ್ಥ ಕುಂಬಳೆ ಪ್ರೆಸ್ ಪೋರಂ ವತಿಯಿಂದ ನೀಡಲಾಗುವ ಎರಡನೇ ವರ್ಷದ ಮುತ್ತಲಿಬ್ ಸ್ಮಾರಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 2021ರ ಜನವರಿಯಿಂದ ಡಿಸೆಂಬರ್ 31ರ ವರೆಗೆ ಮಲಯಾಳ ಮತ್ತು ಕನ್ನಡ ಭಾಷೆಗಳ ದಿನಪತ್ರಿಕೆಗಳು ಮತ್ತು ಸಂಜೆ ಪತ್ರಿಕೆಗಳಲ್ಲಿ ಕಾಸರಗೋಡು ಜಿಲ್ಲೆಗೆ ಸಂಬಂಧಿಸಿ ಪ್ರಕಟವಾದ ಸಾಮಾಜಿಕ ಕಳಕಳಿಯ ಸುದ್ದಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಮೂದುಗಳನ್ನು ಕಾರ್ಯದರ್ಶಿ, ಪ್ರೆಸ್ ಪೋರಂ ಕುಂಬಳೆ ಇವರಿಂದ ಜೂನ್ 30 ರಂದು ಸಂಜೆ 5 ಗಂಟೆಯೊಳಗೆ ತಲಪುವಂತೆ ಕಳಿಸಬೇಕು. ಆಯಾ ಬ್ಯೂರೋ ಮುಖ್ಯಸ್ಥರು ಮತ್ತು ಪತ್ರಿಕೆಯಿಂದ ದೃಢೀಕರಿಸಿದ ಸುದ್ದಿಯ ಮೂರು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ದೂರದರ್ಶನ ಮತ್ತು ಆನ್‍ಲೈನ್ ಮಾಧ್ಯಮ ಸುದ್ದಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಂಬಳೆ ಪ್ರೆಸ್ ಪೋರಂ ನಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಅಧ್ಯಕ್ಷ ಸುರೇಂದ್ರನ್ ಕರಿವೆಳ್ಳೂರು ಅ|ಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ವಿಷಯ ಮಂಡಿಸಿದರು. ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಪತ್ರಕರ್ತ ಕೆಎಂಕೆ ಸತ್ತಾರ್ ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ವಂದಿಸಿದರು.

.jpg)
