HEALTH TIPS

ಪ್ಲಾಸ್ಟಿಕ್ ನಿಮ್ಮ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು ಎಚ್ಚರಿಕೆ!

ಪ್ಲಾಸ್ಟಿಕ್ ನಮ್ಮ ಆರೋಗ್ಯಕ್ಕೆ ಜೊತೆಗೆ ನಮ್ಮ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಪ್ಲಾಸ್ಟಿಕ್ ಬಳಕೆ ಹಾಗೂ ಮಾಲಿನ್ಯ ನಮ್ಮ ಸಂತಾನೋತ್ಪತ್ತಿ ಅಥವಾ ಫಲವತ್ತತೆಗೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪ್ಲಾಸ್ಟಿಕ್‌ನಲ್ಲಿರುವ ಸಂಯುಕ್ತ ಪುರುಷರು ಹಾಗೂ ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಈ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ.

ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಪ್ಲಾಸ್ಟಿಕ್‌ನ ಪ್ರಭಾವವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

 ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುವ ಅಂಶಗಳು: ಪುರುಷರು ಮತ್ತು ಮಹಿಳೆಯರಲ್ಲಿ ಹಲವಾರು ಜೀವನಶೈಲಿಯ ಅಭ್ಯಾಸಗಳು ಫಲವತ್ತತೆ ಅಥವಾ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತವೆ. ಆಹಾರ, ತೂಕ ಮತ್ತು ವ್ಯಾಯಾಮ, ಮಾನಸಿಕ ಮತ್ತು ದೈಹಿಕ ಒತ್ತಡ, ವಸ್ತುವಿನ ಬಳಕೆ ಮತ್ತು ದುರ್ಬಳಕೆ ಕೆಲವು ಅಂಶಗಳಾಗಿವೆ. ಅಂತಃಸ್ರಾವಕ ವ್ಯವಸ್ಥೆ ಅಥವಾ ಎಂಟೋಕ್ರೈನ್ ಸಿಸ್ಟಮ್ ಸ್ತ್ರೀಯರ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು, ಪರಿಸರ ಮಾಲಿನ್ಯದಂತಹ ಅಂಶಗಳು ಇದರ ವಿನ್ಯಾಸದ ಬದಲಾವಣೆಗೆ ಕಾರಣವಾಗಬಹುದು. ಇದರ ಫಲಿತಾಂಶವೇ PCOD (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ನಂತಹ ಅಸ್ವಸ್ಥತೆಗಳು...

ಪ್ಲಾಸ್ಟಿಕ್ ಸಂತಾನೋತ್ಪತ್ತಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ EDC (ಎಂಡೋಕ್ರೈನ್ ಡಿಸ್ರಪ್ಟಿಂಗ್ ಕೆಮಿಕಲ್ಸ್) ಸಂಯುಕ್ತಗಳನ್ನು ಹೊಂದಿರುತ್ತವೆ. ಇವು ಪುರುಷರ ಮತ್ತು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಸೇರಿದಂತೆ, ದೇಹದ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿವೆ. ಇವು ನಮ್ಮ ಆಹಾರ, ನೀರು, ಪರಿಸರ, ಗಾಳಿಯ ಮೂಲಕ ನಮ್ಮ ದೇಹ ಸೇರುತ್ತವೆ. ಪ್ಲಾಸ್ಟಿಕ್, ಪರ್ಸನಲ್ ಕೇರ್ ಉತ್ಪನ್ನಗಳು ಮತ್ತು ಆಹಾರ ಉತ್ಪನ್ನಗಳಂತಹ ಸಾಮಾನ್ಯ ವಸ್ತುಗಳಲ್ಲಿ 800 ನಕಲಿ EDC ಇರುತ್ತದೆ. ಅಷ್ಟೇ ಅಲ್ಲ, ಕೈಗಾರಿಕಾ, ಕೃಷಿ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿಯೂ ಬಳಸಲಾಗುತ್ತದೆ. ಆದ್ದರಿಂದ ಸಹಜವಾಗಿಯೇ ಅವುಗಳನ್ನು ಬಳಸಿದಾಗ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮುಖ್ಯವಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳನ್ನು ಅಡ್ಡಪಡಿಸಿ, ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು ಎಂದು ಸಂಶೋಧನೆ ತೋರಿಸಿದೆ. ಇದು ಹಾರ್ಮೋನ್ ಮಟ್ಟವನ್ನು ಬದಲಾಯಿಸುವುದರ ಜೊತೆಗೆ, ಇದು ಕಳಪೆ ಗುಣಮಟ್ಟದ ವೀರ್ಯ ಮತ್ತು ಮೊಟ್ಟೆಗಳು, ವೀರ್ಯದಲ್ಲಿನ DNA ಹಾನಿ, ದೀರ್ಘ ಋತುಚಕ್ರ, ದೀರ್ಘಾವಧಿಯ ಗರ್ಭಾವಸ್ಥೆಯ ಅವಧಿ, ಗರ್ಭಪಾತದ ಹೆಚ್ಚಿನ ಅಪಾಯ ಮತ್ತು ಅವದಿ ಪೂರ್ವ ಋತುಬಂಧಕ್ಕೆ ಕಾರಣವಾಗಬಹುದು.

ಪರಿಸರ ಮಾಲಿನ್ಯದಿಂದ ನಿಮ್ಮ ಸಂತಾನೋತ್ಪತ್ತಿಗೆ ಅಡ್ಡಿಯಾಗುವುದೇ?

ಪರಿಸರದ ಮಾಲಿನ್ಯಕ್ಕೆ ಹಲವಾರು ಕಾರಣಗಳಿವೆ. ಅದರಲ್ಲೂ ಮುಖ್ಯವಾಗಿ ಪರಿಸರ ಮಾಲಿನ್ಯದಲ್ಲಿ ಪ್ಲಾಸ್ಟಿಕ್‌ ಪಾಲು ಹೆಚ್ಚೇ ಇದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಕಾಣಸಿಗುವುದು ಹೊಸತೇನಲ್ಲ. ಇಡೀ ಜಗತ್ತೇ ಪ್ಲಾಸ್ಟಿಕ್‌ನಿಂದ ತುಂಬಿ ತುಳುಕಾಡುತ್ತಿದೆ. ಇವೆಲ್ಲವೂ ಕೊನೆಗೆ ಸೇರೋದು ನಮ್ಮ ಸಮುದ್ರವನ್ನೇ.. ಇದರಿಂದ ಹಾಳಾಗುವುದು ಸಮುದ್ರ ಜೀವಿಗಳ ಆರೋಗ್ಯ, ಜೊತೆಗೆ ಸಮುದ್ರಾಹಾರ ಸೇವಿಸುವ ಜನರ ಆರೋಗ್ಯ. ಏಕೆಂದರೆ ಪ್ಲಾಸ್ಟಿಕ್‌ನಲ್ಲಿರುವ ವಿಷಕಾರಿ ಸಂಯುಕ್ತಗಳು ಸಮುದ್ರಾಹಾರದ ಮೂಲಕ ನಮ್ಮ ದೇಹವನ್ನು ಸೇರಬಹುದು. ಇದು ನಮ್ಮ ಸಂತಾನೋತ್ಪತ್ತಿಯಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು. ಅಷ್ಟೇ ಅಲ್ಲ, ಪಾದರಸ, ಸೀಸ ಮತ್ತು ಪರಿಸರ ಮಾಲಿನ್ಯಕಾರಕಗಳಂತಹ ಲೋಹಗಳಿಗೆ ಹೆಚ್ಚು ತೆರೆದುಕೊಂಡಿರುವುದರಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚಾಗುತ್ತವೆ.

 ಆರೋಗ್ಯಕರ ಸಂತಾನೋತ್ಪತ್ತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು?:

 ಗಂಡು, ಹೆಣ್ಣು ಸೇರಿದಂತೆ ಪ್ರತಿಯೊಬ್ಬರೂ ಸರಿಯಾದ ನಿದ್ರೆಯ ಚಕ್ರವನ್ನು ಕಾಪಾಡಿಕೊಳ್ಳಬೇಕು. ನಿದ್ದೆ ಮಾಡುವಾಗ ದೇಹವು ಜೀವಕೋಶದ ಪುನರುತ್ಪಾದನೆ ಮತ್ತು ಹಾರ್ಮೋನ್ ಬದಲಾವಣೆಗಳಿಗೆ ಒಳಗಾಗುವುದರಿಂದ, ನಿದ್ರೆಯು ಸಂತಾನೋತ್ಪತ್ತಿ ಪ್ರಕ್ರಿಯೆಯ ನಿರ್ಣಾಯಕ ಅಂಶವಾಗಿದೆ. ಹೆಚ್ಚುವರಿಯಾಗಿ, ಮೆಲಟೋನಿನ್, ನಿದ್ರೆಯ ಸಮಯದಲ್ಲಿ ಉತ್ಪತ್ತಿಯಾಗುವ ಡಾರ್ಕ್ ಹಾರ್ಮೋನ್ ಇಡೀ ದೇಹ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತದೆ. 

ಆಗಾಗ ವ್ಯಾಯಾಮ ಅಭ್ಯಾಸ ಮಾಡಿ. ಸಂಸ್ಕರಿಸಿದ ಆಹಾರಗಳಿಂದ ದೂರವಿರಿ, ಸಮತೋಲಿತ ಆಹಾರವನ್ನು ಸೇವಿಸಿ. ತಂಬಾಕು ಮತ್ತು ಆಲ್ಕೋಹಾಲ್ನಿಂದ ದೂರವಿರಿ. ನಿಮ್ಮ ಔಷಧಿಗಳ ಯಾವುದೇ ಋಣಾತ್ಮಕ ಪರಿಣಾಮಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಊಟಕ್ಕಾಗಿ ಪ್ಲಾಸ್ಟಿಕ್ ಪಾತ್ರೆಗಳ ಬಳಕೆಯನ್ನು ತಪ್ಪಿಸಿ. ಅದರ ಬದಲಾಗಿ ಸೆರಾಮಿಕ್, ಬಿದಿರು, ತೆಂಗಿನಕಾಯಿ ಮತ್ತು ಬಟ್ಟೆಯಂತಹ ವಸ್ತುಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಗೃಹೋಪಯೋಗಿ ವಸ್ತುಗಳಿಗೆ ಬದಲಾಯಿಸುವುದು

 ಆರೋಗ್ಯಕರವಾಗಿರಲು ಕೆಲವು ಮಾರ್ಗಗಳಾಗಿವೆ. ತೀರ್ಮಾನ: ಈಗಿನ ತಂತ್ರಜ್ಞಾನವು ನಮಗೆ ಹೆಚ್ಚು ಆರಾಮದಾಯಕ ಜೀವನವನ್ನು ನೀಡಿದ್ದರೂ, ಅದು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಮಾಡುತ್ತಿದೆ ಎಂಬುದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತೇವೆ. ಮುಖ್ಯವಾಗಿ, ಇದು ನಮ್ಮ ಜಗತ್ತಿನ ಶಾಶ್ವತವಾದ ಹಾನಿಗೆ ಕಾರಣವಾಗುತ್ತದೆ. ಆದ್ದರಿಂದ, ಪ್ಲಾಸ್ಟಿಕ್‌ಗಳನ್ನು ಪರಿಸರ ಸ್ನೇಹಿ ಸರಕುಗಳೊಂದಿಗೆ ಬದಲಾಯಿಸುವುದು ಒಂದೇ ನಮ್ಮ ಮುಂದಿರುವ ಆಯ್ಕೆ. ಇದು ನಮ್ಮ ಪರಿಸರವನ್ನು ಕಾಪಾಡುವುದರ ಜೊತೆಗೆ, ನಮ್ಮ ಆರೋಗ್ಯಕ್ಕೂ ಉತ್ತಮ ಆಯ್ಕೆಯಾಗಿದೆ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries