ಮಂಜೇಶ್ವÀರ : ಮೀಯಪದವು ವಿದ್ಯಾವರ್ಧಕ ಎ. ಯು.ಪಿ ಶಾಲೆಯ ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ಯಂ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಹಿರಿಯ ಅಧ್ಯಾಪಕ ನಾರಾಯಣ.ಯು ಹಾಗೂ ಶಾಲಾ ಯು.ಪಿ ಎಸ್.ಆರ್.ಜಿ ಕನ್ವಿನರ್ ವಿಘ್ನೇಶ್ ಎಸ್ ಶುಭ ಹಾರೈಸಿದರು. ನಂತರ ಪುಟಾಣಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರಿದವು. ಅಧ್ಯಾಪಕಿ ಸ್ವಾತಿ ಸ್ವಾಗತಿಸಿ, ಯಾಸ್ಮಿನ್ ವಂದಿಸಿದರು. ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಸುಶಾಂತ್ ನಿರೂಪಿಸಿದರು.
ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆ ಉದ್ಘಾಟನೆ
0
ಜುಲೈ 25, 2022




.jpg)
