HEALTH TIPS

ಮಗುವಿನ ಆರೋಗ್ಯಕರ ಬೆಳವಣಿಗೆಗೆ ಆಟದ ಸಮಯ ಎಷ್ಟಿರಬೇಕು ಗೊತ್ತಾ?

 ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿಡುವಲ್ಲಿ ಆಟ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ವ್ಯಾಯಾಮದ ಒಂದು ಭಾಗ. ಆದ್ರೆ ಆಟ ಕೇವಲ ಬೆಳೆದ ಮಕ್ಕಳಿಗೆ ಮಾತ್ರ ಸೀಮಿತ ಎಂದಲ್ಲ ಅಥವಾ ಕೇವಲ ಮೈದಾನದಲ್ಲಿ ಹೋಗಿ ಆಡುವುದು ಎಂಬ ಅರ್ಥವೂ ಅಲ್ಲ. ಇದು ಪ್ರತಿಯೊಂದು ಶಿಶುವಿಗೂ ಮುಖ್ಯವಾಗಿದೆ.

ಹಾಗಾದರೆ, ಹುಟ್ಟಿ ಕೆಲ ತಿಂಗಳುಗಳು ಕಳೆದ ಶಿಶುಗಳು ಹಾಗೂ ಈಗಷ್ಟೆ ಅಂಬೆಗಾಲಿಡುತ್ತಿರುವ ಮಕ್ಕಳು ದಿನಕ್ಕೆ ಎಷ್ಟು ಸಮಯ ಆಟಕ್ಕೆ ಮೀಡಲಿಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ:

ಅಂಬೆಗಾಲಿಡುತ್ತಿರುವ ಮಕ್ಕಳಿಗೆ ಆಟ ಆಡುವುದರ ಸಿಗುವ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಪ್ರಕಾರ, ಮಕ್ಕಳಿಗೆ ಆಟವಾಡಲು ಅವಕಾಶ ನೀಡುವುದರಿಂದ ಸಿಗುವ ಪ್ರಯೋಜನಗಳು ಹೀಗಿವೆ:

* ಮಕ್ಕಳ ಭಾನಾತ್ಮಕ ಬೆಳವಣಿಗೆ ಸಹಕಾರಿ.

* ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು.

* ದೈಹಿಕ ದಕ್ಷತೆ ಮತ್ತು ಶಕ್ತಿಯನ್ನು ಉತ್ತೇಜಿಸುವುದು.

* ಸೃಜನಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರ ತಂತ್ರಗಳನ್ನು ಉತ್ತೇಜಿಸುವುದು.

* ಹೊಸ ಪಾತ್ರಗಳನ್ನು ಅನ್ವೇಷಿಸಲು ಅವಕಾಶವನ್ನು ನೀಡುತ್ತದೆ.

* ಗುಂಪಿನಲ್ಲಿದ್ದಾಗ ಹೇಗೆ ಕೆಲಸ ಮಾಡುವುದು, ಹಂಚಿಕೊಳ್ಳುವುದು, ಮಾತುಕತೆ ನಡೆಸುವುದು ಮತ್ತು ಸಂಘರ್ಷಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ಕಲಿಯಲು ಮಕ್ಕಳಿಗೆ ಸಹಾಯ ಮಾಡುತ್ತದೆ.

* ಮಕ್ಕಳು ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳಬೇಕೆಂದು ಕಲಿಯುತ್ತಾರೆ.

* ಮಕ್ಕಳು ಶಾಲೆಗೆ ಹೋಗಲು ಸಿದ್ಧವಾಗುತ್ತಾರೆ.

ಪೋಷಕರು ಮತ್ತು ಮಕ್ಕಳ ಬಾಂಧವ್ಯಕ್ಕೆ ಆಟವು ಒಂದು ಪ್ರಮುಖ ಮಾರ್ಗವಾಗಿದೆ. ಒಟ್ಟಿಗೆ ಆಟವಾಡುವುದು ಅಮೂಲ್ಯವಾದ ಪಾಠಗಳನ್ನು ಕಲಿಯಲು ಮತ್ತು ಪರಸ್ಪರ ಸಂವಹನ ನಡೆಸಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುವ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.

ಶಿಶುಗಳಿಗೆ ಆಟದ ಸಮಯ ಎಷ್ಟಿರಬೇಕು?:

ಹುಟ್ಟಿನಿಂದಲೇ ತಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಅಗತ್ಯಗಳನ್ನು ಪೂರೈಸಲು ಪೋಷಕರು ಆಟವನ್ನು ಒಂದು ಅಸ್ತ್ರವನ್ನಾಗಿ ಬಳಸಬೇಕೆಂದು AAP ಶಿಫಾರಸು ಮಾಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಿಮ್ಮ ಶಿಶುವನ್ನು ಹೆಚ್ಚು ಕಾಲ ನೆಲದ ಮೇಲೆ ಮುಕ್ತವಾಗಿ ತಿರುಗಾಡಲು ಬಿಡಬೇಕು ಎಂದು ವಿಶ್ವ ಅರೋಗ್ಯ ಸಂಸ್ಥೆ ಶಿಫಾರಸ್ಸು ಮಾಡುವುದು. ಆದರೆ ಮಗುವಿನ ಮೇಲ್ವಿಚಾರಣೆಗಾಗಿ ಅದರ ಜೊತೆ ಯಾರಾದರೂ ಇರಬೇಕು ಎಂಬುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ಕೆಲವೇ ತಿಂಗಳುಗಳಾಗಿದ್ದರೂ ಸಹ, ದಿನಕ್ಕೆ ಮೂರು ಬಾರಿ ಆಟದ ಸೆಷನ್ ಆಗಬೇಕು. ಅಂದ್ರೆ, ದಿನಕ್ಕೆ ಮೂರರಿಂದ ಐದು ನಿಮಿಷಗಳ ಕಾಲ, ಮಗುವನ್ನ ತನ್ನಷ್ಟಕ್ಕೆ ಆಡಲು ಬಿಡಬೇಕು.

ಆಟವಾಡುವುದು ಎಂದರೆ ನಿಮ್ಮ ಮಗುವಿಗೆ ದಿನವಿಡೀ ಆಟಿಕೆಗಳೊಂದಿಗೆ ಬಿಟ್ಟು ಬಿಡುವುದು ಎಂದರ್ಥವಲ್ಲ. ಮಗುವಿನ ಜೊತೆ ಕೂತು ಹಾಡು ಹೇಳುವುದು, ಮೋಜು ಮಾಡುವುದು, ಹೊಸ ಹೊಸ ಚಿತ್ರಗಳ ಪರಿಚಯ ಮಾಡಿಸುವುದು, ಮುಖದ ಅಭಿವ್ಯಕ್ತಿಗಳನ್ನು ಕಲಿಸುವುದು ಈ ರೀತಿ ಹಲವಾರು ಮೌಲ್ಯಯುತ ಮಾರ್ಗಗಳಿವೆ. ಇವುಗಳಲ್ಲಿ ಯಾವುದದನ್ನಾದರೂ ನಿಮ್ಮ ಮಗುವಿನ ಆಟದ ಸಮಯಕ್ಕೆ ಬಳಸಬಹುದು.

ಅಂಬೆಗಾಲಿಡುವ ಮಕ್ಕಳಿಗೆ ಎಷ್ಟು ಸಮಯದ ಆಟ ಅವಶ್ಯಕತೆ ಇದೆ? : ಅಂಬೆಗಾಲಿಡುವ ಮಕ್ಕಳಿಗೆ ಪ್ರತಿದಿನವೂ ಆಡಲು ಅವಕಾಶವಿರಬೇಕು ಎಂದು ಎಎಪಿ ಹೇಳುತ್ತದೆ. ಅಂಬೆಗಾಲಿಡುವವರಿಗೆ ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಯಾವುದೇ ಕಟ್ಟಪಾಡುಗಳಿಲ್ಲದ ಆಟ ಆಡಲು ಅವಕಾಶ ನೀಡಬೇಕು ಎಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಅದ್ರಲ್ಲಿ ಕನಿಷ್ಠ 30 ನಿಮಿಷಗಳ ಸಕ್ರಿಯ, ವಯಸ್ಕರ ನೇತೃತ್ವವಿರುವ ಯಾವುದಾದರೂ ರಚನಾತ್ಮಕ ಆಟಗಳನ್ನು ಆಡಲು ಬಿಡಬೇಕು. ಇದು ಅವರ ಆಸಕ್ತಿಯನ್ನು ಅನ್ವೇಷಿಸಲು ಸಹಾಯ ಮಾಡುವುದು. ಇದರಲ್ಲಿ ಯಾವುದಾದರೂ ಕ್ರಿಯೇಟಿವ್ ಅಗಿರುವ ಆಟಿಕೆ ಜೋಡಿಸುವ ಆಟ, ಬಣ್ಣ ತುಂಬುವಂತಹ ಆಟ ಹೀಗೆ ರಚನಾತ್ಮಕ ಆಟಗಳನ್ನು ಆಡಿಸಬಹುದು.

ಆಟದಲ್ಲಿ ವೈವಿಧ್ಯತೆ ಇರಲಿ: ಶಿಶು ಅಥವಾ ಅಂಬೆಗಾಲಿಡುತ್ತಿರುವ ಮಕ್ಕಳ ಆಟದಲ್ಲಿ ಗಮನವಹಿಸಬೇಕಾದ ವಿಚಾರಗಳು: ಆಟದಲ್ಲಿ ವೈವಿಧ್ಯತೆ ಇರಲಿ: ಪ್ರತಿದಿನವೂ ಒಂದೇ ರೀತಿಯ ಆಟ ಮೀಸಲಿಡುವುದು ಸರಿಯಲ್ಲ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ವಿವಿಧ ರೀತಿಯ ಆಟದ ಅವಶ್ಯಕತೆ ಇದೆ. ಆದ್ದರಿಂದ ಒಂದು ದಿನ ಮೆದುಳಿಗೆ ಸಂಬಂಧಿಸಿದ ಆಟ ಆಡಿದರೆ, ಮತ್ತೊಂದು ದಿನ ಹಾಡು, ಸಂಗೀತ ಮೊದಲಾದವುಗಳನ್ನು ಆರಿಸಿಕೊಳ್ಳಿ. ಆಟದಲ್ಲಿ ವೈವಿಧ್ಯತೆ ಇರಲಿ.

ನಿಮ್ಮ ಮಗು ನಾಯಕನಾಗಿರಲಿ: ನಿಮ್ಮ ಮಗು ಆಟವಾಡುತ್ತಿರುವಾಗ ನೀವು ಸೇರಿಕೊಳ್ಳಿ. ಆದರೆ ಹೀಗೆಯೇ ಮಾಡಬೇಕು ಎನ್ನುವ ಒತ್ತಡ ಅವರ ಮೇಲೆ ಹೇರಬೇಡಿ. ಮಗು ತನಗೆ ಇಷ್ಟವಿರುವಂತೆ ಆಟವನ್ನು ಆಡಲು ಬಿಡಿ. ಆಟದಲ್ಲಿ ಮಗು ಪ್ರಯೋಗ ಮಾಡಿ ತಿಳಿದುಕೊಳ್ಳಬೇಕೇ ಹೊರತು, ಮೋಜಿನಲ್ಲೂ ಸರಿ ತಪ್ಪು ಹುಡುಕುವುದು ಸರಿಯಲ್ಲ. 

ಮೊಬೈಲ್, ಕಂಪ್ಯೂಟರ್‌ನಿಂದ ದೂರವಿರಿ: ಆಟ ಸ್ಕ್ರೀನ್-ಮುಕ್ತವಾಗಿರುವುದು ನಿಮ್ಮ ಮಗುವನ್ನು ಸೃಜನಶೀಲವಾಗಿರಿಸುತ್ತದೆ. ಜೊತೆಗೆ ನಿಮ್ಮ ಮಗುವಿನೊಂದಿಗೆ ಆಟವಾಡುವಾಗ ನಿಮ್ಮ ಫೋನ್‌ನಿಂದ ದೂರವಿರಿ, ಇದು ನೀವು ಅವರಿಗೆ ಸಂಪೂರ್ಣ ಗಮನ ನೀಡುತ್ತಿದ್ದೀರಿ ಎಂಬುದರ ಅರಿವು ಮೂಡಿಸುವುದು.

ಪ್ಲೇಗ್ರೂಪ್‌ಗೆ ಹೋಗಿ: ಇತರ ಮಕ್ಕಳ ಜೊತೆ ಬೆರೆಯುವುದು, ಆಟವಾಡುವುದು ನಿಮ್ಮ ಮಗುವಿಗೆ ಸಂವಹನ ಕೌಶಲ್ಯಗಳನ್ನು ಕಲಿಸುವುದು. ಆದ್ದರಿಂದ, ಮಕ್ಕಳನ್ನು ಕರೆದು ಪ್ಲೇ ಹೋಮ್ ಅಥವಾ ಮಕ್ಕಳಿರುವ ಜಾಗಕ್ಕೆ ಹೋಗಿ.

ಹೊರಗೆ ಹೋಗಿ: ಮಕ್ಕಳು ಆಟದ ಮೈದಾನ ಅಥವಾ ಉದ್ಯಾನವನದ ಸುತ್ತಲೂ ಓಡಲು, ಜಿಗಿಯಲು ಮತ್ತು ಹತ್ತಲು ಎಂದಿಗೂ ಆಯಾಸಗೊಳ್ಳುವುದಿಲ್ಲ. ಚಿಕ್ಕ ಮಕ್ಕಳು ಸಹ ನೈಸರ್ಗಿಕ ಪ್ರಪಂಚದ ದೃಶ್ಯಗಳು, ಶಬ್ದಗಳು, ಮತ್ತು ವಾಸನೆಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ.ಆದ್ದರಿಂದ ಅವರನ್ನು ಆಟಕ್ಕೆ ಹೊರಗೆ ಕರೆದುಕೊಂಡಲು ಹೋಗಲು ಮರೆಯದಿರಿ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries