ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಬದಿಯಡ್ಕ ಪಂಚಾಯತಿ ಪೆರಡಾಲ ಗಿರಿಜನ ಕಾಲೋನಿಗೆ ಭೇಟಿ ನೀಡಿದರು. ಕೊರಗ ವಿಭಾಗದ ಸಮಗ್ರ ಅಭಿವೃದ್ಧಿಗೆ ಕಂದಾಯ, ಸ್ಥಳೀಯಾಡಳಿತ ಇಲಾಖೆ, ಲೋಕೋಪಯೋಗಿ, ಜಿಲ್ಲಾ ನಿರ್ಮಿತಿ ಕೇಂದ್ರ, ಕೌಶಲ್ಯ ಇಲಾಖೆ, ಕೃಷಿ ಇಲಾಖೆ ಹಾಗೂ ಕುಟುಂಬಶ್ರೀಗಳ ಸಹಕಾರದೊಂದಿಗೆ ಯೋಜನೆಗಳನ್ನು ಅನುμÁ್ಠನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದಕ್ಕಾಗಿ ಎರಡು ವಾರದೊಳಗೆ ಕೊರಗ ಜನಾಂಗದ ಸದ್ಯದ ಸ್ಥಿತಿಗತಿಗಳ ಕುರಿತು ಮೂಲ ಮಾಹಿತಿ ನೀಡುವಂತೆ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಗಿರಿಜನ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ, ಎಟಿಡಿಒ ಕೆ.ವಿ.ರಾಘವನ್, ಸ್ಥಳೀಯ ಮುಖಂಡೆ ವಿಮಲಾ, ಎಣ್ಮಕಜೆ ಟ್ರೈಬಲ್ ಅಧಿಕಾರಿ ಆರ್.ಕೆ.ಗಿರೀಶ್, ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಗಿರಿಜನ ಪ್ರಚಾರಕಿ ಪುಷ್ಪವೇಣಿ ಮತ್ತಿತರರು ಭೇಟಿಯಲ್ಲಿ ಭಾಗವಹಿಸಿದ್ದರು.






