ಕೊಚ್ಚಿ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಗೆ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ಆರೋಪಿಯನ್ನು ಪಂಜಾಬ್ ನಲ್ಲಿ ಬಂಧಿಸಲಾಗಿದೆ.
ಕಂಟೋನ್ಮೆಂಟ್ ಪೋಲೀಸರು ಅಮೃತಸರ ಮೂಲದ ಸಚಿನ್ ದಾಸ್ ನನ್ನು ಬಂಧಿಸಿದ್ದಾರೆ.
ಮುಂಬೈನ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ಸ್ವಪ್ನಾಗೆ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದರು. ಐಟಿ ವಿಭಾಗದಲ್ಲಿ ಕೆಲಸ ಕೊಡಿಸಲು ಸ್ವಪ್ನಾ ನಕಲಿ ಪದವಿ ಪ್ರಮಾಣಪತ್ರವನ್ನು ತಯಾರಿಸಿದ್ದರು.
ಆರೋಪಿಯನ್ನು ಎರಡು ದಿನಗಳಲ್ಲಿ ಕೇರಳಕ್ಕೆ ಕರೆತರಲಾಗುವುದು. ಸಚಿನ್ ದಾಸ್ ಅವರ ಅಡಗುತಾಣದಿಂದ ಕೇರಳ ಸೇರಿದಂತೆ ಭಾರತದ ವಿವಿಧ ವಿಶ್ವವಿದ್ಯಾಲಯಗಳ ಪ್ರಮಾಣಪತ್ರಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸ್ವಪ್ನಾ ಸುರೇಶ್ ಬಂಧನವನ್ನು ಈ ಹಿಂದೆಯೇ ದಾಖಲಿಸಲಾಗಿತ್ತು.ಸ್ವಪ್ನಾ ಸುರೇಶ್ ಸ್ನೇಹಿತೆಯ ಮೂಲಕ ಸಚಿನ್ ಅವರನ್ನು ಭೇಟಿಯಾಗಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ನಕಲಿ ಪ್ರಮಾಣಪತ್ರ ನೀಡಿ ಸ್ವಪ್ನಾ ಸುರೇಶ್ ಸ್ಪೇಸ್ ಪಾರ್ಕ್‍ನಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದನ್ನು ಪೋಲೀಸರು ಪತ್ತೆ ಹಚ್ಚಿದ್ದರು.
ಸ್ವಪ್ನಾ ಸುರೇಶ್‍ಗೆ ನಕಲಿ ಪ್ರಮಾಣ ಪತ್ರ ನೀಡಿದ ವ್ಯಕ್ತಿಯ ಬಂಧನ: ಬಂಧಿತನ ಕೈಯಲ್ಲಿತ್ತು ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಮಾಣಪತ್ರಗಳು!
0
ಆಗಸ್ಟ್ 23, 2022
Tags




