ಕಾಸರಗೋಡು: ಕರಿಯರ್ ಗೈಡೆನ್ಸ್ ಮತ್ತು ಅಡೋಲ್‍ಸೆಂಟ್ ಕೌನ್ಸೆಲಿಂಗ್ ಸೆಲ್, ಕಾಸರಗೋಡು ಇವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಹೈಯರ್ ಸೆಕೆಂಡರಿ ವಿಭಾಗ ವತಿಯಿಂದ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಕಾಞಂಗಾಡಿನಲ್ಲಿ ಜರುಗಿತು.
ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಸಮಾರಂಭ ಉದ್ಘಾಟಿಸಿದರು. ವಲಯ ಹೈಯರ್ ಸೆಕೆಂಡರಿ ಉಪ ನಿರ್ದೇಶಕಿ ಪಿ.ವಿ.ಪ್ರಸೀದಾ ಅಧ್ಯಕ್ಷತೆ ವಹಿಸಿದ್ದರು. ಕರಿಯರ್ ಗೈಡೆನ್ಸ್ ರಾಜ್ಯ ಸಂಯೋಜಕ ಡಾ.ಸಿ.ಎಂ.ಅಜೀಂ ಸಂಘಟನೆ ಚಟುವಟಿಕೆಗಳನ್ನು ವಿವರಿಸಿದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಣ ಜಿಲ್ಲಾ ಸಂಚಾಲಕರಾದ ಸಿ.ಮನೋಜ್ ಕುಮಾರ್, ಮೈಸನ್ ಕಲರಿಕಲ್ ಉಪಸ್ಥಿತರಿದ್ದರು. ಕರಿಯರ್ ಸೆಲ್ ಜಿಲ್ಲಾ ಸಂಯೋಜಕಿ ಪುಷ್ಪಲತಾ ಸ್ವಾಗತಿಸಿದರು. ಜಂಟಿ ಸಂಯೋಜಕ ಪಿ.ವಿ.ರಘುನಾಥ್ ವಂದಿಸಿದರು.
ಅಂತಾರಾಷ್ಟ್ರೀಯ ತರಬೇತುದಾರ ಎಂ.ಎನ್ ಚಂದ್ರನ್ ನಾಯರ್ ಕೋಯಿಕ್ಕೋಡ್ ಅವರು ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜಿಲ್ಲೆಯ 86 ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರು ತರಬೇತಿಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರಿಗೆ ತರಬೇತಿ ಕಾರ್ಯಕ್ರಮ
0
ಸೆಪ್ಟೆಂಬರ್ 21, 2022
Tags





