ಮುಳ್ಳೇರಿಯ: ಪ್ರತಿಫಲಾಪೇಕ್ಷೆಯಿಲ್ಲದೆ ನಿತ್ಯ ನಿರಂತರ ಭಗವಂತನ ನಾಮಸ್ಮರಣೆಯೊಂದಿಗೆ ತೊಡಗಿಸಿಕೊಂಡಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ಧಾರ್ಮಿಕ ಮುಂದಾಳು, ಕೊಡುಗೈದಾನಿ ಉದ್ಯಮಿ ವಸಂತ ಪೈ ಬದಿಯಡ್ಕ ಹೇಳಿದರು.
ಅವರು ಕಾನಕ್ಕೋಡು ಶ್ರೀ ವನ ಶಾಸ್ತಾರ ಕ್ಷೇತ್ರದಲ್ಲಿ ಡಿ. 23 ರಿಂದ 25 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮವನ್ನ ನೆರವೇರಿಸಿ ಮಾತನಾಡುತ್ತಿದ್ದರು.
ಆರಾಧನಾಲಯಗಳ ಪುನರ್ ನವೀಕರಣ ನಮ್ಮ ಅಂತಃಕರಣದ ಪುನರವಲೋಕನ ಮತ್ತು ಪಾವಿತ್ರ್ಯತೆಯನ್ನು ಕಾಪಿಡುವ ಸಂಕೇತವಾಗಿದೆ. ಆಯಾ ಪ್ರದೇಶಗಳ ಇಂತಹ ಆರಾಧನಾಲಯಗಳ ಶಕ್ತಿಸಂಚಯನದಿಂದ ವ್ಯಾಪಕ ಧನಾತ್ಮಕತೆ ವೃದ್ದಿಸಿ ನೆಮ್ಮದಿ ನೆಲೆಯಾಗುವುದು ಎಮದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಕೋಳಿಕ್ಕಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರಡ್ಕ ಗ್ರಾಮ ಪಂಚಾಯತಿ ಸದಸ್ಯ ರತ್ನಾಕರ ರಾವ್, ದೇವಾನಂದ ಶೆಟ್ಟಿ, ಗಂಗಾಧರ ರಾವ್ ಭಾವನಕೊಚ್ಚಿ, ಸೇವಾ ಸಮಿತಿ ಕಾರ್ಯದರ್ಶಿ ಬಾಲಕ್ಕಷ್ಟ ಮೀತಲೆವೀಡ್, ಮಹಿಳಾ ಸಮಿತಿ ಅಧ್ಯಕ್ಷೆ ಸರಸ್ಪತಿ ಮೊದಲಾದವರು ಶುಭಾಶಂಸನೆಗೈದರು. ನಾರಾಯಣ ಇತ್ತಿಕಾಲಮೂಲೆ ಸ್ವಾಗತಿಸಿ, ಬೇಬಿ ಟೀಚರ್ ವಂದಿಸಿದರು.

.jpg)
.jpg)
