ಉಪ್ಪಳ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಮಂಜೇಶ್ವರ ಉಪ ಜಿಲ್ಲಾಮಟ್ಟದ 32ನೇ ವಾರ್ಷಿಕ ಸಮ್ಮೇಳನವು ಬೇಕೂರು ಸರ್ಕಾರಿ ಹೈಯರಿ ಸೆಕೆಂಡರಿ ಶಾಲೆಯಲ್ಲಿ ಜರಗಿತು.
ಸಮ್ಮೇಳನವನ್ನು ಕೆ ಎಸ್ ಟಿ ಎ ರಾಜ್ಯ ಕಾರ್ಯದರ್ಶಿ ಕೆ. ರಾಘವನ್ ಉದ್ಘಾಟಿಸಿ ಕೇರಳ ರಾಜ್ಯ ಕಲೋತ್ಸವದಲ್ಲಿ ಉಳಿದ ಭಾμÉಗಳಂತೆ ಕನ್ನಡ ಮಾಧ್ಯಮದ ಎಲ್ಲಾ ಸ್ಪರ್ಧೆಗಳನ್ನು ಮ್ಯಾನುವಲಿನಲ್ಲಿ ಅಳವಡಿಸುವಂತೆ ಒತ್ತಾಯಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನಕ್ಕೆ ಬೆನ್ನಿ ಟಿ ಅವರು ಧ್ವಜಾರೋಹಣ ಮಾಡಿದರು.ಸಂತೋμï ಕೆ ಅವರು ರಕ್ತಸಾಕ್ಷಿ ಪ್ರಮೇಯವನ್ನು ಹಾಗೂ ಶ್ರೀನಿವಾಸನ್ ಶ್ರದ್ಧಾಂಜಲಿಯನ್ನು ಮಂಡಿಸಿದರು. ಕೆ.ಎಸ್.ಟಿ.ಎ ಜಿಲ್ಲಾ ಉಪಾಧ್ಯಕ್ಷ ಬಾಲಮಣಿ ಬಿ.ಕೆ. ಸಂಘಟನಾ ವರದಿಯನ್ನು ಮಂಡಿಸಿದರು.ಸಮ್ಮೇಳನದಲ್ಲಿ ಜಿಲ್ಲಾ ಜತೆಕಾರ್ಯದರ್ಶಿ ಯು.ಶ್ಯಾಮ್ ಭಟ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ಬಿ, ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ವಿಜಯ ಕುಮಾರ್, ವಿಜಯ ಸಿ.ಯಚ್, ಆಶ್ರಫ್ ಮೊದಲಾದವರು ಶುಭಾಶಂಸನೆಗೈದರು. ಪಾಲುಗಾರಿಕೆ ಪಿಂಚಣಿ ಯೋಜನೆ ಉಪೇಕ್ಷಿಸಬೇಕು, ಬಾಕಿ ಇರುವ ತುಟ್ಟಿ ಭತ್ಯೆ ಕೂಡಲೇ ನೀಡಬೇಕು, ಅನುದಾನಿತ ಶಾಲಾ ನೇಮಕಾತಿ ಕೂಡಲೇ ಅಂಗೀಕರಿಸಬೇಕು ಮೊದಲಾದ ಪ್ರಮೇಯಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು. ಉಪಜಿಲ್ಲಾ ಕಾರ್ಯದರ್ಶಿ ರವೀಂದ್ರ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮಮತಾ ವಂದಿಸಿದರು.
ಕೇರಳ ರಾಜ್ಯ ಕಲೋತ್ಸವದಲ್ಲಿ ಕನ್ನಡ ಸ್ಪರ್ಧೆಗಳನ್ನು ಒಳಪಡಿಸಬೇಕು: ರಾಘವನ್. ಕೆ
0
ನವೆಂಬರ್ 23, 2022
Tags




.jpg)
