HEALTH TIPS

ಕಾತ್ರ್ಯಾನಿಯಮ್ಮ ಮತ್ತು ನಂಜಿಯಮ್ಮ; ಗಮನ ಸೆಳೆದ ಕೇರಳದ ನಾರಿಶಕ್ತಿ ಜಾನಪದೀಯ ಕೋಷ್ಟಕ: ಆನಂದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು


               ನವದೆಹಲಿ: 74ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೇರಳದ ಟ್ಯಾಬ್ಲೋ ಗಮನ ಸೆಳೆಯಿತು. ಕೇರಳದ ಟ್ಯಾಬ್ಲೋ ಮಹಿಳಾ ಶಕ್ತಿಯನ್ನು ನೆನಪಿಸುವಂತಿತ್ತು.
          ‘ನಾರಿಶಕ್ತಿ ಮತ್ತು ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯ’ ಎಂಬ ಕೇಂದ್ರವಾಗಿರಿಸಿದ್ದ ವಿಷಯದೊಂದಿಗೆ  ಟ್ಯಾಬ್ಲೋ ಸಿದ್ಧಪಡಿಸಲಾಗಿತ್ತು. ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕೇರಳ ಬುಡಕಟ್ಟು ನೃತ್ಯ ಪ್ರದರ್ಶಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು.



           ಸಾಮಾನ್ಯ ಸ್ಥಳೀಯ ಮಹಿಳೆಯರ ಸಮುದಾಯ ಮತ್ತು ಚಟುವಟಿಕೆಗಳು ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಪ್ರಗತಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕೇರಳ ಕೋಷ್ಟಕವು ಪ್ರದರ್ಶಿಸಿತು. 96 ನೇ ವಯಸ್ಸಿನಲ್ಲಿ 2020 ರ ನಾರಿಶಕ್ತಿ ಪ್ರಶಸ್ತಿಯನ್ನು ಗೆದ್ದ ಕಾತ್ರ್ಯಾಯನಿ ಅಮ್ಮ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ನಂಜಿiÀುಮ್ಮ ಅವರ ಶಿಲ್ಪಗಳನ್ನು ಟ್ಯಾಬ್ಲೋದಲ್ಲಿ ನೋಡಬಹುದು.
        ನಂಜಿಯಮ್ಮ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತೆ 'ಕಲಕಥಾ ಸಂದನಂ' ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯವನ್ನು ಸಂಕೇತಿಸುವ ಟ್ಯಾಬ್ಲೋವನ್ನು ಕೇರಳ ಪ್ರದರ್ಶಿಸಿತು. ರಾಷ್ಟ್ರಪತಿ  ದ್ರೌಪದಿ ಮುರ್ಮು ಕೇರಳದ ಟ್ಯಾಬ್ಲೋವನ್ನು ನಗುತ್ತಾ ಆನಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries