ತಿರುವನಂತಪುರ: ರಾಜ್ಯ ಯುವ ಆಯೋಗಕ್ಕೆ ಸರ್ಕಾರ ಹೆಚ್ಚಿನ ಹಣ ಮಂಜೂರು ಮಾಡಿದೆ. ಹೆಚ್ಚಿನ ಹಣ ನೀಡುವಂತೆ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ಪತ್ರ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ 18 ಲಕ್ಷ ಮಂಜೂರಾಗಿದೆ. ಚಿಂತಾ ಜೋರೋಮ್ ಅವರು ಹಣಕಾಸು ಇಲಾಖೆಗೆ ಪತ್ರ ಬರೆದು 26 ಲಕ್ಷ ರೂ.ಬೇಡಿಕೆ ಇರಿಸಿದ್ದರು. ಹಣದ ಕೊರತೆಯಿಂದ ನೌಕರರಿಗೆ ಸಂಬಳ ಮತ್ತು ಸವಲತ್ತುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಚಿಂತಾ ಜೆರೋಮ್ ಪತ್ರದಲ್ಲಿ ತಿಳಿಸಿದ್ದರು. ಕಳೆದ ಬಜೆಟ್ ನಲ್ಲಿ ಮಂಜೂರಾಗಿದ್ದ 76.6 ಲಕ್ಷ ರೂ.ಗೆ ಹೆಚ್ಚುವರಿಯಾಗಿ ಮರು ಹಂಚಿಕೆ ಮಾಡಲಾಗಿದೆ. ಡಿಸೆಂಬರ್‍ನಲ್ಲಿ 9 ಲಕ್ಷ ರೂ. ಮಂಜೂರುಗೊಳಿಸಲಾಗಿತ್ತು. 2022-23ರ ಹಣಕಾಸು ವರ್ಷದಲ್ಲಿ ಯುವ ಆಯೋಗಕ್ಕೆ ಮಾತ್ರ ಸರ್ಕಾರ ಇದುವರೆಗೆ 1.03 ಕೋಟಿ ರೂ. ನೀಡಿದೆ.
ದಿನನಿತ್ಯದ ಖರ್ಚಿಗೂ ಹಣವಿಲ್ಲದೆ ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. 10 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಗಳನ್ನು ಖಜಾನೆ ಮೂಲಕ ವರ್ಗಾಯಿಸಲು ಹಣಕಾಸು ಇಲಾಖೆಯಿಂದ ಅನುಮೋದನೆ ನೀಡುವಂತೆ ಸರ್ಕಾರ ನಿನ್ನೆ ಸುತ್ತೋಲೆ ಹೊರಡಿಸಿತ್ತು. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಯುವ ಆಯೋಗಕ್ಕೆ 18 ಲಕ್ಷ ರೂ.ಮಂಜೂರುಗೊಳಿಸಿರುವುದು ಅಚ್ಚರಿಮೂಡಿಸಿದೆ.
ಖರ್ಚಿಗೆ ತತ್ವಾರ: ಯುವ ಆಯೋಗಕ್ಕೆ ಸರಕಾರದಿಂದ 18 ಲಕ್ಷ ಮಂಜೂರು!
0
ಫೆಬ್ರವರಿ 23, 2023


