ಇಡುಕ್ಕಿ: ಮುನ್ನಾರ್ ನಲ್ಲಿ ಮತ್ತೆ ಬಾಲ್ಯ ವಿವಾಹ ವರದಿಯಾಗಿದೆ. ವರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
26 ವರ್ಷದ ಯುವಕ 17 ವರ್ಷದ ಬಾಲಕಿಯನ್ನು ವಿವಾಹವಾದ ಬಗ್ಗೆ ತಿಳಿದುಬಂದಿದೆ. . ಬಾಲಕಿಯ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ದೇವಿಕುಳಂ ಕುಟ್ಟಿಯರ್ ವಾಲಿ ಮೂಲದ ವ್ಯಕ್ತಿಯ ವಿರುದ್ಧ ಪೋಕ್ಸೋ ಮತ್ತು ಅತ್ಯಾಚಾರದ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ವಿವಾಹ ನಡೆದಿತ್ತು. ಬಾಲಕಿ ಈಗ ಏಳು ತಿಂಗಳ ಗರ್ಭಿಣಿ. ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಿ ತಾಯಿಯೊಂದಿಗೆ ಬಿಡುಗಡೆಗೊಳಿಸಲಾಯಿತು.
ಕೆಲವು ದಿನಗಳ ಹಿಂದೆಯಷ್ಟೇ ಇಡಮಲಕುಡಿಯಲ್ಲಿಯೂ ಬಾಲ್ಯವಿವಾಹ ವರದಿಯಾಗಿದೆ. 47 ವರ್ಷದ ಕರಣ್ 16 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಗಡಿ ಭಾಗದ ಗ್ರಾಮಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದ್ದರೂ ದೂರುಗಳ ಕೊರತೆ ಪೋಲೀಸರನ್ನು ಹಾಗೂ ಮಕ್ಕಳ ಕಲ್ಯಾಣ ಸಮಿತಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಮುನ್ನಾರ್ ನಲ್ಲಿ ಮತ್ತೊಂದು ಬಾಲ್ಯ ವಿವಾಹ ವರದಿ: 26 ರ ಯುವಕನಿಂದ 17 ರ ಬಾಲಕಿಯ ವಿವಾಹ: ವರನ ಮೇಲೆ ಪೋಕ್ಸೋ ಆರೋಪ
0
ಫೆಬ್ರವರಿ 05, 2023


