ಪೆರ್ಲ: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಗ್ರಾಮ ಭೇಟಿಯ ಅಂಗವಾಗಿ ಎಣ್ಮಕಜೆ, ಶೇಣಿ, ಪೈವಳಿಕೆ ಗ್ರಾಮ ಕಚೇರಿಗಳಿಗೆ ಶುಕ್ರವಾರ ಭೇಟಿ ನೀಡಿದರು.
ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸಿದರು. ವಿಪತ್ತು ಪರಿಹಾರ ಕಾರ್ಯಾಚರಣೆಯ ಭಾಗವಾಗಿ, ನೀರಾವರಿ ಇಲಾಖೆಯು ಶೇಣಿ ಗ್ರಾಮ ಕಚೇರಿ ಬಳಿ ನದಿಗಳ ಮಣ್ಣು ಮತ್ತು ಅವಶೇಷಗಳನ್ನು ಸಂಗ್ರಹಿಸಿರುವ ಪ್ರದೇಶವನ್ನು ಪರಿಶೀಲಿಸಲಾಯಿತು. ಗ್ರಾ.ಪಂ.ಕಚೇರಿಗಳಲ್ಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಜಿಲ್ಲಾಧಿಕಾರಿ ವಿಚಾರಿಸಿದರು.

.jpg)
.jpg)
.jpg)
.jpg)
