HEALTH TIPS

ಚಿನ್ನ ಕಳ್ಳಸಾಗಣೆ ಇತ್ಯರ್ಥಕ್ಕೆ 30 ಕೋಟಿ ಆಫರ್; ಹಣ ಪಡೆದು ದೇಶ ತೊರೆಯುವಂತೆ ಸೂಚನೆ: ಪಾಲಿಸದಿದ್ದರೆ ಜೀವಾಪಾಯದ ಬೆದರಿಕೆ: ಸ್ವಪ್ನಾ ಸುರೇಶ್ ಬಹಿರಂಗ


            ಬೆಂಗಳೂರು: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳನ್ನು ಸುಳ್ಳೆಂದು ಬೆದರಿಕೆ ಹಾಕಲಾಗಿದೆ ಎಂದು ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ್ದಾರೆ.
             ಇದಕ್ಕಾಗಿ 30 ಕೋಟಿ ನೀಡುವುದಾಗಿ ಅಮಿಷ ನೀಡಲಾಗಿದ್ದು, ಸಿಪಿಎಂ ಪಕ್ಷದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಬಂದು ಬೆದರಿಕೆ ಹಾಕಿದ್ದಾರೆ ಎಂದು ಸ್ವಪ್ನಾ ಆರೋಪಿಸಿದ್ದಾರೆ. ಫೇಸ್ ಬುಕ್ ಲೈವ್ ಮೂಲಕ ನಿನ್ನೆ ಸ್ವಪ್ನಾ ಪ್ರತಿಕ್ರಿಯೆ ನೀಡಿದ್ದಾರೆ.
           ಹೇಳಿದ್ದಾದರೂ ಏನು?:
       "ಮೂರು ದಿನಗಳ ಹಿಂದೆ ನನಗೆ ಅನಾಮಧೇಯ ಕರೆ ಬಂದಿತ್ತು. ನಾನು ವಿಜಯ್ ಪಿಳ್ಳೆ ಎಂದು ಪರಿಚಯಿಸಿದ ಕಣ್ಣೂರಿನ ವ್ಯಕ್ತಿ ನನಗೆ ಕರೆ ಮಾಡಿದ್ದÀರು. ಅವರು ನನ್ನ ಸಂದರ್ಶನವನ್ನು ಕೇಳಿದರು. ಅವರು ಇದಕ್ಕಾಗಿ ಬೆಂಗಳೂರಿಗೆ ಬರುವುದಾಗಿ ಹೇಳಿದರು. ನಾನು ಸಂದರ್ಶನಕ್ಕೆ ಸಿದ್ಧನಾಗಿದ್ದೆ. ಅವರು ಪದೇ ಪದೇ ಕೇಳಿದರು, ನಾನು ನನ್ನ ಮಕ್ಕಳೊಂದಿಗೆ ಅವರು ಸೂಚಿಸಿದ ಹೋಟೆಲ್‍ಗೆ ತಲುಪಿದೆವು, ನಾವು ಲಾಬಿಯಲ್ಲಿ ಕುಳಿತು ಮೊದಲ ಎರಡು ನಿಮಿಷಗಳ ಕಾಲ ಮಾತನಾಡಿದೆವು, ಒಬ್ಬರನ್ನೊಬ್ಬರು ಪರಿಚಯಿಸಿದ ಬಳಿಕ ಅವರು ಸೆಟಲ್‍ಮೆಂಟ್ ಮಾತುಕತೆಯನ್ನು ಪ್ರಾರಂಭಿಸಿದರು.
          ನಾವು ಹೇಳಿದಂತೆ ಹೇಳಿಕೆ ನೀಡಿ, ಹಣಪಡೆದು ನಿಮ್ಮ ಮಕ್ಕಳೊಂದಿಗೆ ಬೇರೆಡೆ ತೆರಳಿ. ಹರಿಯಾಣ ಅಥವಾ ಜೈಪುರಕ್ಕೆ ತೆರಳಿ. ಅಲ್ಲಿ ಎಲ್ಲ ಅಗತ್ಯ ನೆರವು ನೀಡಲಾಗುವುದು. ಫ್ಲ್ಯಾಟ್ ಒದಗಿಸಲಾಗುವುದು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ಅವರ ಕೈಗೆ ನೀಡಬೇಕು. ಅದನ್ನು ಕ್ಲೌಡ್‍ನಲ್ಲಿ ಅಥವಾ ಬೇರೆಡೆ ಸಂಗ್ರಹಿಸಿದ್ದರೆ, ಅದಕ್ಕೆ ಪ್ರವೇಶ ನೀಡಿ. ನಾಶವಾಗುತ್ತದೆ ಎಂದು ವಿಜಯ್ ಪಿಳ್ಳೆ ಹೇಳಿದರು.

           ಅರ್ಥವಾಗುವಂತೆ ಇದನ್ನು ನಿರ್ದಿಷ್ಟವಾಗಿ ಹೇಳಿದ್ದೇನೆ ಎಂದು ವಿಜಯ್ ಪಿಳ್ಳೈ ಹೇಳಿದರು. ಪಕ್ಷದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ವಿಶೇಷ ಸಲಹೆ ನೀಡಿದ್ದರೆಂದು ಅವರು ತಿಳಿಸಿದರು. ಸ್ವಪ್ನಾ ಸುರೇಶ್ ಈ ಯಾವುದೇ ವಿಷಯಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದಿದ್ದರೆ, ಸ್ವಪ್ನಾ ಬೆಂಗಳೂರು ತೊರೆಯಲು ನಿರ್ಧರಿಸದಿದ್ದರೆ, ಯಾವುದೇ ಮುಂದೆ ಸಂದರ್ಭದಲ್ಲೂ ಮಾತುಕತೆ ನಡೆಸುವುದಿಲ್ಲ ಎಂದು ಗೋವಿಂದನ್ ಸಲಹೆ ನೀಡಿದ್ದರು. ಒಪ್ಪದಿದ್ದರೆ ನನ್ನ ಪ್ರಾಣಕ್ಕೆ ತೊಂದರೆಯಾಗುವ ಬಗ್ಗೆ ಸೂಚನೆ ನೀಡಿದ್ದರು ಎಂದು ಸ್ವಪ್ನಾ ತಿಳಿಸಿರುವರು. ಇದು ಸ್ಪಷ್ಟ ಬೆದರಿಕೆಯಾಗಿತ್ತು ಎಂದಿರುವರು.
           ವೀಣಾ, ಮುಖ್ಯಮಂತ್ರಿ ಮತ್ತು ನಾನು ಯಾರ ವಿರುದ್ಧ ಮಾತನಾಡಿದರೂ ಎಲ್ಲವೂ ಸುಳ್ಳು ಎಂದು ಹೇಳಿ ಜನರ ಕ್ಷಮೆ ಕೇಳಿ ಇಲ್ಲಿಂದ ಕಾಲ್ಕೀಳಬೇಕು. ನಕಲಿ ಪಾಸ್‍ಪೆÇೀರ್ಟ್ ಮತ್ತು ವೀಸಾವನ್ನು ಒಂದು ತಿಂಗಳೊಳಗೆ ನೀಡಲಾಗುತ್ತದೆ. ಮಲೇμÁ್ಯ ಅಥವಾ ಯುಕೆಗೆ ಹೋಗಲು ನಾವು ಎಲ್ಲವನ್ನೂ ವ್ಯವಸ್ಥೆಗೊಳಿಸಬಹುದು. ಸ್ವಪ್ನಾ ಸುರೇಶ್ ಬದುಕಿದ್ದಾಳೆ, ಈಗ ಎಲ್ಲಿದ್ದಾಳೆ ಎಂದು ಕೇರಳದ ಜನತೆಗೆ ತಿಳಿಯಬಾರದು. ಪರಿಹಾರ ಮೊತ್ತವಾಗಿ 30 ಕೋಟಿ ರೂ. ನೀಡಲಾಗುತ್ತದೆ. ನಿಮಗೆ ಬೇಕಾದ ಎಲ್ಲಾ ಸಹಾಯವನ್ನು ನಾವು ನೀಡುತ್ತೇವೆ. ಮುಖ್ಯಮಂತ್ರಿ, ಅವರ ಮಗಳು, ಪಕ್ಷದ ಕಾರ್ಯದರ್ಶಿ ಎಲ್ಲರೂ ಸಹಾಯ ಮಾಡುತ್ತಾರೆ ಎಂದು ಹೇಳಿದ್ದ.
           ಅದರಿಂದ ಸಾವು ಖಚಿತ ಎಂದು ಅರ್ಥವಾಯಿತು. ಏಕೆಂದರೆ ತನಗೆ ಒಬ್ಬನೇ ತಂದೆ. ಕೊನೆಯವರೆಗೂ ಹೋರಾಡಲು ನಿರ್ಧರಿಸಿ ಹಿಂತಿರುಗಿದೆ ಎಂದು ಸ್ವಪ್ನಾ ತಿಳಿಸಿದರು. ನನ್ನ ಆರೋಪದ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಹೀಗಿರುವಾಗ ಯಾರೋ ಬಂದು ನನ್ನನ್ನು ಮತ್ತು ನನ್ನ ಮಕ್ಕಳನ್ನು ನಾಶಪಡಿಸುತ್ತಾರೆ ಎಂದು ಹೇಳಿದ್ದಾರೆ. ನನ್ನನ್ನು ಎಲಿಮಿನೇಟ್ ಮಾಡುತ್ತೇನೆ ಎಂದು ಗೋವಿಂದನ್ ಮಾಸ್ತರ್ ಸ್ಪಷ್ಟಪಡಿಸಿದ್ದಾರೆ ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries