ತಿರುವನಂತಪುರಂ: ಕೇರಳದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಳಗೊಳ್ಳುತ್ತಿದ್ದು, ಜೀವಜಾಲ, ಸಸ್ಯಗಳು ನಲುಗುತ್ತಿದೆ. ತಿರುವನಂತಪುರಂ, ಕೊಟ್ಟಾಯಂ, ಕಣ್ಣೂರು ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ.
ವಿಪತ್ತು ನಿರ್ವಹಣಾ ಇಲಾಖೆ ಪ್ರಕಟಿಸಿರುವ ಉಷ್ಣತಾ ಸೂಚ್ಯಂಕದಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಬಿಸಿಲಿನ ಝಳದ ಭೀತಿ ಎದುರಾಗಿದೆ. ಕಣ್ಣೂರು, ಕೋಝಿಕ್ಕೋಡ್, ಎರ್ನಾಕುಳಂ, ಕೊಟ್ಟಾಯಂ, ಅಲಪ್ಪುಳ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆಗೆ ತುತ್ತಾಗುವ ಸಾಧ್ಯತೆ ಇದೆ.
ಶಾಖ ಸೂಚ್ಯಂಕವು ಗಾಳಿಯ ಉಷ್ಣತೆ ಮತ್ತು ತೇವಾಂಶದ ಸಂಯೋಜನೆಯೊಂದಿಗೆ ಗಾಳಿಯು ಎಷ್ಟು ಬಿಸಿಯಾಗಿರುತ್ತದೆ ಎಂಬುದರ ಅಳತೆಯಾಗಿದೆ. ಕೇರಳ ಕರಾವಳಿ ರಾಜ್ಯವಾಗಿರುವುದರಿಂದ ವಾತಾವರಣದ ಆದ್ರ್ರತೆ ತುಂಬಾ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಶಾಖ ಸೂಚ್ಯಂಕ ನಕ್ಷೆಯನ್ನು ಪ್ರಕಟಿಸಲಾಗುವುದು ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಉಷ್ಣ ಸೂಚ್ಯಂಕವು ವಾತಾವರಣದ ಸಂಯೋಜಿತ ಶಾಖ ಮತ್ತು ಆದ್ರ್ರತೆಯ ಅಳತೆಯಾಗಿದೆ. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶಾಖದ ಅನುಭವವನ್ನು ಸೂಚಿಸಲು ಶಾಖ ಸೂಚ್ಯಂಕವನ್ನು ಬಳಸುತ್ತವೆ. ದಿನನಿತ್ಯದ ಉಷ್ಣತೆಯು ಹೆಚ್ಚಾದಂತೆ, ಶಾಖದಿಂದ ಉಂಟಾಗುವ ಅಸ್ವಸ್ಥತೆಯೂ ಹೆಚ್ಚಾಗುತ್ತದೆ. ಕೇರಳ ಸಾಮಾನ್ಯವಾಗಿ ಬಿಸಿಯಾಗಿರುವುದರಿಂದ ಕೇಂದ್ರ ಹವಾಮಾನ ಇಲಾಖೆಯ ಸ್ವಯಂಚಾಲಿತ ಹವಾಮಾನ ಮಾಪಕಗಳ ಮೂಲಕ ಲಭ್ಯವಿರುವ ತಾಪಮಾನ ಮತ್ತು ಸಾಪೇಕ್ಷ ಆದ್ರ್ರತೆಯ ಮಾಹಿತಿಯನ್ನು ಆಧರಿಸಿ ಅಧ್ಯಯನ ಉದ್ದೇಶಗಳಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಖ ಸೂಚ್ಯಂಕ ನಕ್ಷೆಯನ್ನು ಸಿದ್ಧಪಡಿಸಿದೆ.
ಏಳು ಜಿಲ್ಲೆಗಳಲ್ಲಿ ಬಿಸಿಲಿನ ಝಳದ ಭೀತಿ; ಎಚ್ಚರಿಕೆ ನೀಡಿದ ವಿಪತ್ತು ನಿರ್ವಹಣಾ ಇಲಾಖೆ
0
ಮಾರ್ಚ್ 09, 2023
Tags


