HEALTH TIPS

ಪಾಕಿಸ್ತಾನ ಕೆಣಕಿದರೆ ಭಾರತದಿಂದ ಯುದ್ಧದ ಸಾಧ್ಯತೆ ಅಧಿಕ: ಅಮೆರಿಕ ಗುಪ್ತಚರ ವರದಿ

           ಭಾರತ ಮತ್ತು ಪಾಕಿಸ್ತಾನ ಹಾಗೂ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು, ಅವುಗಳ ಮಧ್ಯೆ ಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ವಿಭಾಗವು ಅಲ್ಲಿನ ಸಂಸತ್‌ಗೆ ಬುಧವಾರ ತಿಳಿಸಿದೆ.

                  ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಈ ಹಿಂದಿಗಿಂತಲೂ ಸೇನಾ ಬಲದ ಮೂಲಕ ಪ್ರತಿಕ್ರಿಯೆ ನೀಡುವ ಸಂಭವ ಇದೆ ಎಂದು ಕೂಡ ಅದು ಹೇಳಿದೆ.

               ಅಮೆರಿಕ ಬೇಹುಗಾರಿಕಾ ಸಮುದಾಯದ ವಾರ್ಷಿಕ ಬೆದರಿಕೆ ಮೌಲ್ಯಮಾಪನದ ಸಾರಾಂಶದ ವರದಿಯನ್ನು ಕಾಂಗ್ರೆಸ್ ವಿಚಾರಣೆ ವೇಳೆ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಕೆ ಮಾಡಿದೆ.

                 ಭಾರತ ಮತ್ತು ಚೀನಾ ಮಹತ್ವದ ದ್ವಿಪಕ್ಷೀಯ ಗಡಿ ಮಾತುಕತೆಗಳಲ್ಲಿ ತೊಡಗಿವೆ. ಇತ್ತೀಚಿನ ದಶಕಗಳಲ್ಲಿಯೇ ಬಹಳ ಗಂಭೀರ ಎನಿಸಿರುವ, 2020ರಲ್ಲಿ ನಡೆದ ಮಾರಣಾಂತಿಕ ಘರ್ಷಣೆಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಗಡಿ ಸಮಸ್ಯೆ, ಸಂಬಂಧಗಳು ಹಳಸಿಕೊಂಡೇ ಇರಲಿವೆ ಎಂದು ವರದಿ ತಿಳಿಸಿದೆ.

                   ವಿವಾದಿತ ಗಡಿಯುದ್ದಕ್ಕೂ ಭಾರತ ಹಾಗೂ ಚೀನಾ ಎರಡೂ ದೇಶಗಳು ನಿಯೋಜಿಸಿರುವ ಸೇನಾ ಪಡೆಗಳು, ಎರಡು ಪರಮಾಣು ಶಕ್ತಿಗಳ ನಡುವಿನ ಶಸ್ತ್ರಾಸ್ತ್ರ ಸಂಘರ್ಷದ ಅಪಾಯವನ್ನು ಹೆಚ್ಚಿಸಿವೆ. ಇದು ಅಮೆರಿಕದ ಜನರು ಹಾಗೂ ಹಿತಾಸಕ್ತಿಗಳಿಗೆ ನೇರ ಬೆದರಿಕೆ ಉಂಟುಮಾಡುವ ಹಾಗೂ ಅಮೆರಿಕದ ಮಧ್ಯಪ್ರವೇಶಕ್ಕೆ ಕರೆ ನೀಡುವ ಸಾಧ್ಯತೆ ಇದೆ. ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಈ ಹಿಂದೆ ನಡೆದ ಸಂಘರ್ಷವು ಸಣ್ಣ ಮಟ್ಟದ್ದಾಗಿದ್ದರೂ, ತಕ್ಷಣವೇ ಭುಗಿಲೇಳುವಷ್ಟು ಪರಿಣಾಮಕಾರಿಯಾಗಿತ್ತು ಎಂದು ವಿವರಿಸಿದೆ.

                            ಪಾಕಿಸ್ತಾನದೊಂದಿಗೆ ಸಮರ ಸಂಭವ
            ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಕಳವಳಕಾರಿ ಸಂಗತಿಯಾಗಿದೆ. ಏಕೆಂದರೆ ಎರಡು ಅಣ್ವಸ್ತ್ರ ದೇಶಗಳ ಮಧ್ಯೆ ಸಂಘರ್ಷ ತೀವ್ರಗೊಳ್ಳುವ ಅಪಾಯ ದಟ್ಟವಾಗಿದೆ. ಹೊಸದಿಲ್ಲಿ ಹಾಗೂ ಇಸ್ಲಾಮಾಬಾದ್‌ಗಳು 2021ರಲ್ಲಿ ಮಾಡಿಕೊಂಡ ಎಲ್‌ಒಸಿಯಲ್ಲಿನ ಕದನವಿರಾಮ ನವೀಕರಣದ ನಂತರ ಸಂಬಂಧವನ್ನು ತಣ್ಣಗಾಗಿಸಲು ಒಲವು ಹೊಂದಿರಬಹುದು ಎಂದು ತಿಳಿಸಿದೆ.

               "ಆದರೆ, ಭಾರತ ವಿರೋಧಿ ಉಗ್ರ ಗುಂಪುಗಳಿಗೆ ಬೆಂಬಲ ನೀಡುವ ಸುದೀರ್ಘ ಇತಿಹಾಸ ಪಾಕಿಸ್ತಾನಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನದ ನೈಜ ಅಥವಾ ಗ್ರಹಿಸಿದ ಪ್ರಚೋದನೆಗೆ ಹಿಂದೆಂದಿಗಿಂತಲೂ ಸೇನಾ ಬಲದಿಂದ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಕಾಶ್ಮೀರದಲ್ಲಿ ಹಿಂಸಾತ್ಮಕ ಅಶಾಂತಿ ಅಥವಾ ಭಾರತದ ಮೇಲೆ ಭಯೋತ್ಪಾದನಾ ದಾಳಿಯಂತಹ ಸಂಭಾವ್ಯತೆಗಳೊಂದಿಗೆ, ಎರಡೂ ಕಡೆಗಳ ಉದ್ವಿಗ್ನತೆಯ ಗ್ರಹಿಕೆಗಳು ಸಂಘರ್ಷದ ಅಪಾಯಗಳನ್ನು ಹೆಚ್ಚಿಸಿವೆ" ಎಂದು ವರದಿ ಹೇಳಿದೆ.

                   "ಅಮೆರಿಕ- ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಮಾತುಕತೆಯು, ಪಾಕಿಸ್ತಾನದ ಜತೆ ಕೆಲಸ ಮಾಡುವ ನಮ್ಮ ಬಯಕೆಯನ್ನು ಮನವರಿಕೆ ಮಾಡಿಕೊಡಲು ಅಮೆರಿಕಕ್ಕೆ ಅವಕಾಶ ನೀಡುತ್ತದೆ. ಪ್ರದೇಶದಲ್ಲಿನ ಬೆದರಿಕಗಳಾಗಿರುವ ಭಯೋತ್ಪಾದನಾ ಬೆದರಿಕೆಗಳು, ಹಿಂಸಾತ್ಮಕ ಉಗ್ರವಾದದಂತಹ ಸಂಗತಿಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries