ನವದೆಹಲಿ: ನಾಯಿಗಳನ್ನು ಮನೆ ಮಕ್ಕಳಂತೆ ಪ್ರೀತಿಸುವ ಜನರಿದ್ದಾರೆ. ಅವುಗಳಿಗೆ ಮನೆಮಕ್ಕಳಂತೆ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಶ್ವಾನಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಗಂಡು, ಹೆಣ್ಣು ಎರಡು ಶ್ವಾನವನ್ನು ಮದುಮಕ್ಕಳಂತೆ ಸಿಂಗಾರ ಗೊಂಡಿದ್ದವು. ಕೆಂಪು ಬಣ್ಣದ ರೇಷ್ಮೆ ಶಾಲಿನ ಜೊತೆ ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ಅದರ ಜೊತೆಗೆ ಶ್ವಾನಕ್ಕೆ ಗಂಡು ಶ್ವಾನವನನ್ನು ಪುಟ್ಟ ಕಾರಿನಲ್ಲಿ ಕರೆ ತಂದರೆ ಹೆಣ್ಣು ಶ್ವಾನವನ್ನು ಹೆಣ್ಣಿನ ಕಡೆಯವರೆಲ್ಲಾ ಸೇರಿ ಹೊತ್ತುಕೊಂಡು ಬಂದಿದ್ದಾರೆ. ನಂತರ ಈ ಶ್ವಾನ ಜೋಡಿಗೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯೂ ನಡೆದಿದೆ. ಅಲ್ಲದೇ ಬಳಿಕ ಮದ್ವೆಗೆ ಬಂದವರಿಗೆಲ್ಲಾ ಭೋಜನ ಉಣಬಡಿಸಲಾಗಿದೆ. ಕೊನೆಯದಾಗಿ ಗಂಡು ಶ್ವಾನದ ಮನೆಗೆ ಹೆಣ್ಣು ಶ್ವಾನವನ್ನು ಕರೆದೊಯ್ಯಲಾಗಿದೆ.
ಈ ವಿವಾಹ ಸಮಾರಂಭ ಎಲ್ಲಿ ನಡೆದಿದೆ. ಈ ಮದ್ವೆಯನ್ನು ಆಯೋಜಿಸಿದವರಾರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಕುಟುಂಬಕ್ಕೆ ಶ್ವಾನಗಳ ಮೇಲೆ ಇರುವ ಪ್ರೀತಿಗೆ ಮೆಚ್ಚುಗೆ ಸೂಚಿಸಿ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.


