ಕಾಸರಗೋಡು: ಚಿತ್ತಾರಿ ಸೌತ್ ಸರ್ಕಾರಿ ಎಲ್.ಪಿ. ಶಾಲೆಯು ತನ್ನ 93 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ವಾರ್ಡ್ ಸದಸ್ಯ ಸಿ.ಕೆ. ಇμರ್Áದ್ ಅಧ್ಯಕ್ಷತೆಯಲ್ಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಾಂಸ್ಕøತಿಕ ಸಮ್ಮೇಳನವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಟಿ. ದಿವಾಕರನ್ ವರದಿ ಮಂಡಿಸಿದರು. ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಪಂಕಜಾಕ್ಷಿ ಟೀಚರ್ ಹಾಗೂ ಪುರುಷೋತ್ತಮನ್ ಮಾಸ್ತರ್ ಅವರನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಸನ್ಮಾನಿಸಿದರು. ಉಪಜಿಲ್ಲಾ ಕಲೋತ್ಸವ, ಕ್ರೀಡೋತ್ಸವ ಸ್ಪರ್ಧೆಗಳಲ್ಲಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬ್ಲಾಕ್ ಪಂಚಾಯತ್ ಸದಸ್ಯೆ ಪುಷ್ಪಾ ಅಭಿನಂದಿಸಿದರು.
ಪಿ.ಟಿ.ಎ ಅಧ್ಯಕ್ಷ ಜುಬೇರ್ ಎಂ.ಕೆ., ಅಭಿವೃದ್ಧಿ ಸಮಿತಿ ಸಂಚಾಲಕ ವಿನೋದ್ ತಾನತಿಂಗಲ್, ಉಪಾಧ್ಯಕ್ಷ ಮೊಹಮ್ಮದ್ ಕುಂಞÂ್ಞ .ಸಿ., ಅಬ್ದುರ್ರಹ್ಮಾನ್, ಪಿ.ಕೆ. ಅಬ್ದುಲ್ ಅಝೀಝ್, ಕೃಷ್ಣನ್ ತಾನತಿಂಗಲ್, ಜುಬೇರ್ ತಿಡ್ಲ್ ಹಾಗೂ ಮದರ್ ಪಿಟಿಎ ಅಧ್ಯಕ್ಷೆ ಹಾಜಾರ ಎಂ.ಕೆ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನ್ವರ್ ಹಸನ್ ಸ್ವಾಗತಿಸಿ,ಸಹ ಸಂಚಾಲಕ ಹಾರೂನ್ ಚಿತ್ತಾರಿ ವಂದಿಸಿದರು. ಮಕ್ಕಳ ಕಲಾ ಪ್ರದರ್ಶನ, ಬಹುಮಾನ ವಿತರಣೆ ಹಾಗೂ ಇಶಲ್ ನೈಟ್ ನಡೆಯಿತು.
ಚಿತ್ತಾರಿ ಸೌತ್ ಸರ್ಕಾರಿ ಎಲ್.ಪಿ.ಶಾಲೆಯ 93ನೇ ವಾರ್ಷಿಕೋತ್ಸವ
0
ಮಾರ್ಚ್ 08, 2023


