ಕೋಝಿಕ್ಕೋಡ್: ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಸಚಿವರ ವಿರುದ್ಧ ಹರ್ಷಿನಾ ಎಂಬವರು ಪ್ರತಿಭಟನೆಗಿಳಿದು ಗಮನ ಸೆಳೆದಿದ್ದಾರೆ.
ಪರಿಹಾರದ ಬಗ್ಗೆ ವೀಣಾ ಜಾರ್ಜ್ ನೀಡಿದ ಭರವಸೆ ವ್ಯರ್ಥವಾಗಿದ್ದು, ನ್ಯಾಯಕ್ಕಾಗಿ ಸೆಕ್ರೆಟರಿಯೇಟ್ ಮುಂದೆ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಹರ್ಷಿನಾ ತಿಳಿಸಿದ್ದಾರೆ. ಎರಡು ವಾರದಲ್ಲಿ ಪರಿಹಾರ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಇದನ್ನು ಪಾಲಿಸದಿದ್ದಾಗ ಧರಣಿ ಆರಂಭಿಸಲು ಮುಂದಾಗಿದ್ದಾರೆ.
ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಎದುರು ಪ್ರತಿಭಟನೆ ನಡೆಸುತ್ತಿದ್ದ ಹರ್ಷಿನಾಗೆ ಪರಿಹಾರ ನೀಡುವುದಾಗಿ ಸಚಿವೆ ವೀಣಾ ಜಾರ್ಜ್ ಭರವಸೆ ನೀಡಿದ್ದರು. ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ಸಚಿವರ ಮಾತನ್ನು ನಂಬಿದ ಹರ್ಷಿನಾ ಧರಣಿ ಅಂತ್ಯಗೊಳಿಸಿದರು. ಮೂರು ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹರ್ಷಿನಾ ಆರೋಪಿಸಿದ್ದಾರೆ.
ಮುಷ್ಕರ ಅಂತ್ಯಗೊಂಡ ಬಳಿಕ ಸಚಿವರಿಗೆ ದೂರವಾಣಿ ಕರೆ ಮಾಡಿದಾಗ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಕಚೇರಿಯಿಂದ ಸೂಚನೆ ಬಂದಿತ್ತು. ಆದರೆ ಕಳೆದ ಸಚಿವ ಸಂಪುಟ ಸಭೆಯಲ್ಲೂ ಯಾವುದೇ ನಿರ್ಧಾರಕ್ಕೆ ಬರದ ಹಿನ್ನೆಲೆಯಲ್ಲಿ ಹರ್ಷಿನಾ ಹಾಗೂ ಅವರ ಕುಟುಂಬದವರು ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜೊತೆಗೆ ಹರ್ಷಿನಾ ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ಹೈಕೋರ್ಟ್ ಮೆಟ್ಟಿಲೇರುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು ಎಂದಿರುವರು.
ಈಡೇರದ ಆರೋಗ್ಯ ಸಚಿವರ ಭರವಸೆ: ನ್ಯಾಯ ಕೋರಿ ಸೆಕ್ರೆಟರಿಯೇಟ್ ಮೊರೆ ಹೋಗಲಿರುವ ಹರ್ಷಿನಾ
0
ಮಾರ್ಚ್ 28, 2023


