ಪಾಲಕ್ಕಾಡ್: ಪಾಲಕ್ಕಾಡ್ ಜಂಕ್ಷನ್‍ನಿಂದ ಹೊರಟಿದ್ದ ಗೂಡ್ಸ್ ರೈಲನ್ನು ಮಹಿಳೆಯರ ಗುಂಪೆÇಂದು ಮುನ್ನಡೆಸಿದ ವಿದ್ಯಮಾನ ಗಮನ ಸೆಳೆದಿದೆ. ಪೂರ್ಣ ಮಹಿಳಾ ಸಿಬ್ಬಂದಿಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೊತೆಯಾಗಿ ರೈಲು ಓಡಿಸಿದರು.
ಪಾಲಕ್ಕಾಡ್ ವಿಭಾಗದಲ್ಲಿ ಪ್ರಥಮ ಬಾರಿಗೆ ಮಹಿಳಾ ಉದ್ಯೋಗಿಗಳೊಂದಿಗೆ ರೈಲು ಸಂಚಾರ ನಡೆಸಲಾಯಿತು.
ಪಾಲಕ್ಕಾಡ್ ಈರೋಡ್ ಗೂಡ್ಸ್ ರೈಲು ಸಂಪೂರ್ಣವಾಗಿ ಮಹಿಳೆಯರ ನಿಯಂತ್ರಣದಲ್ಲಿ ಸಂಚರಿಸಿತು. ರೈಲು 9.35ಕ್ಕೆ ಪಾಲಕ್ಕಾಡ್ ಜಂಕ್ಷನ್‍ನಿಂದ ಹೊರಟಿತು. ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಮಹಿಳೆಯರೇ ಇದ್ದರು.
ಲೋಕೋ ಪೈಲಟ್ ಎಸ್.ಬಿಜಿ., ಹಿರಿಯ ಸಹಾಯಕ ಲೋಕೋ ಪೈಲಟ್ ಕೆ. ಗಾಯತ್ರಿ, ಸಿಬಂದಿ ಸಿ.ಕೆ. ನಿಮಿಷಾ ಭಾನು ರೈಲು ಸಿಬ್ಬಂದಿಗಳಾಗಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸರಿಯಾದ ಆಚರಣೆಯ ಭಾಗವಾಗಿ ಈ ರೀತಿಯ ರೈಲು ಸೇವೆಯನ್ನು ನಡೆಸಲಾಯಿತು.
ಅಂತರಾಷ್ಟ್ರೀಯ ಮಹಿಳಾ ದಿನ: 'ಪುಲ್ ಲೇಡಿ ಕ್ರ್ಯೂ' ರೈಲು
0
ಮಾರ್ಚ್ 09, 2023


