HEALTH TIPS

ದೇಶದ ಸರ್ಕಾರಿ ವೈಬ್‌ಸೈಟ್‌ಗಳಿಗೆ ಇಂಡೋನೇಷ್ಯಾ ಹ್ಯಾಕರ್‌ಗಳ ಕನ್ನ- ವರದಿ

 

               ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಪೋರ್ಟಲ್‌ಗಳನ್ನು ಗುರಿಯಾಗಿಸಿ ಇಂಡೋನೇಷ್ಯಾದ ಹ್ಯಾಕರ್‌ಗಳ ಗುಂಪು ದಾಳಿ ನಡೆಸಲು ಸಂಚು ರೂಪುಸುತ್ತಿದೆ ಎಂಬ ದೂರಿನ ಹಿನ್ನೆಲೆ ಸೈಬರ್‌ ಭದ್ರತಾ ಸಂಶೋಧಕರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

                 ಸೈಬರ್ ಸೆಕ್ಯುರಿಟಿ ಸೂಚನೆಯ ಪ್ರಕಾರ, ಇಂಡೋನೇಷ್ಯಾದ 'ಹ್ಯಾಕ್ಟಿವಿಸ್ಟಾ' ಎಂಬ ಸಂಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಬಹುದು ಎಂದು ಹೇಳಿದೆ' ಎಂದಿದೆ.

                ಈ ಹ್ಯಾಕರ್‌ಗಳ ಗುಂಪು 1,200ರಷ್ಟು ಸರ್ಕಾರದ ವೆಬ್‌ಸೈಟ್‌ಗಳ ವಿರುದ್ಧ ಉದ್ದೇಶಪೂರ್ವಕವಾಗಿ ದಾಳಿ ನಡೆಸುವ ಇರಾದೆ ಹೊಂದಿದೆ ಎಂದೂ ವರದಿಯಲ್ಲಿದೆ.

                 'ನಾವು ಡಿಜಿಟಲ್ ರೂಪಾಂತರದ ಹಾದಿಯಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಹೊತ್ತಿನಲ್ಲಿ, ಸೈಬರ್ ಸುರಕ್ಷತೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ. DoS ಮತ್ತು DDoS ದಾಳಿಗಳು ಅತಿ ದೊಡ್ಡ ದಾಳಿಯ ಪ್ರಕಾರಗಳಾಗಿವೆ. ಏಕೆಂದರೆ, ಈ ಪ್ರೋಗ್ರಾಮ್ ಅನ್ನು ಸುಲಭವಾಗಿ ಅಳವಡಿಸಿ, ಅವುಗಳು ಹರಡುವ ಪ್ರಮಾಣದ ಜತೆಗೆ ವೇಗವನ್ನು ಹೆಚ್ಚಿಸುವಂತೆ ರೂಪಿಸಬಹುದು' ಎಂದು ಇಂಡಸ್ ಸೈಬರ್ ಸೆಕ್ಯುರಿಟಿ ಸಂಸ್ಥೆಯ ಸಿಇಒ ಆಶಿಶ್ ಟಂಡನ್ ತಿಳಿಸಿದ್ದಾರೆ.

               ' ಹ್ಯಾಕರ್‌ಗಳು ಸುಧಾರಿತ ಕ್ಲೌಡ್ ಆಧಾರಿತ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನವನ್ನು ಬಳಸಿ ದಾಳಿ ಸಂಘಟಿಸುತ್ತಾರೆ. ಸರ್ಕಾರವು ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಕ್ಲೌಡ್‌ಗೆ ಬದಲಾಯಿಸುವ ಸಮಯ ಬಂದಿದೆ' ಎಂದು ಅವರು ತಿಳಿಸಿದರು.

                   2022ರಲ್ಲಿ ದೇಶದ 19 ಸರ್ಕಾರಿ ವೆಬ್‌ಸೈಟ್‌ಗಳು ಹ್ಯಾಕಿಂಗ್ ದಾಳಿಗೆ ಒಳಪಟ್ಟಿದ್ದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries