ಕಾಸರಗೋಡು: ಸಿರಿಬಾಗಿಲು ಕಜೆ ಶ್ರೀ ಧೂಮಾವತೀ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ಹರಿಸೇವೆ ಮತ್ತು ಧರ್ಮನೇಮ ಏ. 25ರಿಂದ 29ರ ವರೆಗೆ ಜರುಗಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಗೊನೆಕಡಿಯುವ ಮುಹೂರ್ತ ಏ. 19ರಂದು ಬೆಳಗ್ಗೆ 9ಕ್ಕೆ ನಡೆಯುವುದು.
25ರಂದು ಬೆಳಗ್ಗೆ 8ಕ್ಕೆ ಗಣಹೋಮ, ನಾಗತಂಬಿಲ, ಮಧ್ಯಾಃನ 12ಕ್ಕೆ ತಂಬಿಲ ಸೇವೆ ನಡೆಯುವುದು. 26ರಂದು ಮಧ್ಯಾಹ್ನ 12ಕ್ಕೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ 6ಕ್ಕೆ ಭಜನೆ, ರಾತ್ರಿ8ಕ್ಕೆ ತೊಡಙಲ್, ಉಪದೈವಗಳ ಕೋಲ ನಡೆಯುವುದು. 27ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, 28ರಂದು ಶ್ರಿದುಮಾವತೀ ದಐವದ ಹರಿಕೆ ಧರ್ಮನೇಮ ನಡೆಯುವುದು. 29ರಂದು ಸಂಜೆ 4ಕ್ಕೆ ಪಳ್ಳದ ಮುದ್ದ ದೈವದ ಕೋಲ, ಗುಳಿಗ ದೈವದ ಕೋಲ ನಡೆಯುವುದು.
ಸಿರಿಬಾಗಿಲು ಕಜೆ ಶ್ರೀ ಧೂಮಾವತೀ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ಧರ್ಮನೇಮ
0
ಏಪ್ರಿಲ್ 18, 2023




