HEALTH TIPS

ಮಣಿಮಾಲಾ ಕಾರು ಅಪಘಾತ: ಎಫ್.ಐ.ಆರ್ ನಿಂದ ಮಾಯವಾದ ಜೋಸ್ ಕೆ ಮಣಿ ಪುತ್ರ ಕೆಎಂ ಮಣಿ ಜೂನಿಯರ್ ಹೆಸರು: ಪ್ರಕರಣವನ್ನು ತಿರುಚಿರುವ ಶಂಕೆ


              ಕೊಟ್ಟಾಯಂ: ಮಣಿಮಲಾದಲ್ಲಿ ಬೈಕ್‍ಗೆ ಕಾರು ಡಿಕ್ಕಿ ಹೊಡೆದು ಯುವಕರು ಸಾವನ್ನಪ್ಪಿದ ಪ್ರಕರಣದಲ್ಲಿ ಜೋಸ್ ಕೆ ಮಣಿ ಅವರ ಪುತ್ರನ ಪರವಾಗಿ ಆಟಗಳು ಆರಂಭಗೊಂಡಂತಿದೆ.
         ಕಾರು ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರ ಮೇಲೆ ಒತ್ತಡ ಏಪ್ಟ್ಟ ಶಂಕೆಯಿದೆ. ಅಪಘಾತದ ನಂತರ ಸಿದ್ಧಪಡಿಸಲಾದ ಮೊದಲ ಎಫ್‍ಐಆರ್‍ನಲ್ಲಿ ಜೋಸ್ ಕೆ ಮಣಿ ಅವರ ಪುತ್ರ ಕೆಎಂ ಮಣಿ ಜೂನಿಯರ್ ಹೆಸರನ್ನು ಕೈಬಿಡಲಾಗಿದೆ. ಎಫ್‍ಐಆರ್‍ನಲ್ಲಿ 45 ವರ್ಷದ ವ್ಯಕ್ತಿ ಎಂದು ಮಾತ್ರ ದಾಖಲಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೆÇಲೀಸ್ ತಂಡ ಜೋಸ್ ಕೆ.ಮಣಿ ಅವರ ಪುತ್ರನನ್ನು ಕಂಡರೂ ಸಿದ್ಧಪಡಿಸಿದ ಮೊದಲ ಎಫ್ ಐಆರ್ ನಲ್ಲಿ ಕೆ.ಎಂ.ಮಣಿ ಜೂನಿಯರ್ ಹೆಸರು ಕೈಬಿಟ್ಟಿರುವುದು ನಿಗೂಢವಾಗಿದೆ. ಅಪಘಾತವಾದ ತಕ್ಷಣ ಸಂಸದರ ಪುತ್ರನ ರಕ್ತದ ಮಾದರಿ ಪರೀಕ್ಷೆ ಮಾಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
       ಶನಿವಾರ ಸಂಜೆ ಪದವಿ ವಿದ್ಯಾರ್ಥಿ ಜೋಸ್ ಕೆ ಮಣಿ ಅವರ ಪುತ್ರ ಕೆ.ಎಂ.ಮಣಿ ಚಲಾಯಿಸುತ್ತಿದ್ದ ಇನ್ನೋವಾ ಕಾರು ಬೈಕ್ ಡಿಕ್ಕಿ ಹೊಡೆದ ಪರಿಣಾಮ  ಸಹೋದರರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆ.ಎಂ.ಮಣಿ ಜೂನಿಯರ್ ಅವರನ್ನು ಪೆÇಲೀಸರು ಬಂಧಿಸಿದ್ದರೂ ತಕ್ಷಣ ಬಿಡುಗಡೆಗೊಳಿಸಿದ್ದರು. ಮ್ಯಾಥ್ಯೂ ಜಾನ್ ಮತ್ತು ಜಿನ್ಸ್ ಜಾನ್ ಮಣಿಮಾಲಾ ನಿಧನರಾದರು. ಇವರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಮಣಿಮಾಲಾ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರಿನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇನ್ನೋವಾ ಹಠಾತ್ ಬ್ರೇಕ್ ಹಾಕಿದ್ದರಿಂದ ಬೈಕ್ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
         ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣವಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಸಂಸದರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಆದರೆ ಇದಾದ ಬಳಿಕ ಎಫ್ ಐಆರ್ ನಲ್ಲಿ ಸಂಸದರ ಪುತ್ರನ ಹೆಸರಿಲ್ಲ ಎಂಬ ವರದಿಗಳ ಪ್ರತಿ ಹೊರ ಬರುತ್ತಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries