ಮಂಜೇಶ್ವರ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ sಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಮಂಜೇಶ್ವರ ತಾಲೂಕಿನ ಕೆದುಂಬಾಡಿ ಕಂಚಿಲಕಟ್ಟೆಯ 13 ಮನೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ (ವಯರಿಂಗ್ ಸಹಿತ) ಮತ್ತು 3 ಮನೆಗಳಿಗೆ ಶೌಚಾಲಯಗಳನ್ನು ಕೊಡುಗೈ ದಾನಿ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಒಂದು ಮನೆಯಲ್ಲಿ ಸ್ವಿಚ್ ಒತ್ತಿ ದೀಪ ಬೆಳಗಿಸುವುದರ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಲೋನಿಯ ಮಕ್ಕಳಿಂದ ಪ್ರಾರ್ಥನೆ ಬಳಿಕ ಶ್ರೀ ಸದಾಶಿವ ಶೆಟ್ಟಿ ಮತ್ತು ಅತಿಥಿಗಳೊಂದಿಗೆ ದೀಪ ಪ್ರಜ್ವಲನೆಗೈದರು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು ಸದಾಶಿವ ಶೆಟ್ಟಿಯವರಂತಹ ಬಡವರ ಬಂಧು, ಕೊಡುಗೈ ದಾನಿಗಳ ಸಹಕಾರದಿಂದ ನಾವು ಆತ್ಮನಿರ್ಭರರಾಗಿ ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ ಎಂದು ಕರೆ ನೀಡಿದರು. ಬಳಿಕ ಸದಾಶಿವ ಶೆಟ್ಟಿಯವರು ಮಾತನಾಡಿ, ನಮ್ಮ ಧರ್ಮ ಸಂಸ್ಕøತಿಯನ್ನು ಉಳಿಸಿ, ಮೂಲಭೂತ ವ್ಯವಸ್ಥೆಗಳಿಗೆ ಬೇಕಾದ ಅವಶ್ಯಕತೆಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ಸರ್ವ ರೀತಿಯ ಸಹಕಾರವನ್ನು ನೀಡುವೆ ಎಂದು ನುಡಿದರು.
ಮಂಜೇಶ್ವರ ಗ್ರಾ.ಪಂ. ಸದಸ್ಯ ರಾಜೇಶ್, ಮಲರಾಯಿ ಕ್ಷೇತ್ರದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ, ರವಿ ಮುಡಿಮಾರ್, ರವಿ ಮಂಜನಾಡಿ ಮತ್ತು ಉಮಾನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿ ಮುಡಿಮಾರ್ ಸ್ವಾಗತಿಸಿ, ಉಮಾನಾಥ್ ವಂದಿಸಿದರು. ಗಂಗಾಧರ ಕೊಂಡೆವೂರು ನಿರ್ವಹಿಸಿದರು.




.jpg)
.jpg)
