ಪೆರ್ಲ: ಪೆರ್ಲ ಸನಿಹದ ಅಜಿಲಡ್ಕ ನಿವಾಸಿ, ವ್ಯಾಪಾರಿ ಬಿ.ಅಬ್ದುಲ್ ರಹಮಾನ್(68)ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಕಳೆದ ಒಂದು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದರು. ಪೆರ್ಲದಲ್ಲಿ ರಸಗೊಬ್ಬರ ವ್ಯಾಪಾರಿಯಾಗಿದ್ದ ಇವರು ನೂರಾ ಎಂಟರ್‍ಪ್ರೈಸ್ ಸಂಸ್ಥೆ ಮಾಲಿಕರಾಗಿದ್ದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕ ಅಧ್ಯಕ್ಷರಾಗಿದ್ದ ಇವರು ಸಾಮಾಜಿಕ, ಸಾಂಸ್ಕøತಿಕ ರಂಗದಲ್ಲೂ ಮುಂಚೂಣಿಯಲ್ಲಿದ್ದರು. ಇವರು ಪತ್ನಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮಾಜಿ ಸದಸ್ಯೆ ದೈನಾಬಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಶೋಕಾರ್ಥ ಭಾನುವಾರ ಪೆರ್ಲ ಪೇಟೆಯಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಹರತಾಳ ಆಚರಿಸಲಾಯಿತು.