HEALTH TIPS

ರಾಜ್ಯದ ಶಾಲೆಗಳಲ್ಲಿ ಡ್ರಗ್ ಬಳಕೆ: ಅಬಕಾರಿ ಇಲಾಖೆಯಿಂದ ಕ್ರಮ

             ತಿರುವನಂತಪುರಂ: ಅಬಕಾರಿ ಇಲಾಖೆಯು ರಾಜ್ಯದ ಶಾಲೆಗಳಲ್ಲಿ ಅಮಲು ಪದಾರ್ಥ ತಡೆಗಟ್ಟಲು ಕ್ರಮಗಳನ್ನು ವೇಗಗೊಳಿಸುತ್ತಿದೆ. ಶಾಲಾ ಆವರಣದಲ್ಲಿ ನಿತ್ಯ ತಿರುಗಾಡುವವರ ಮಾಹಿತಿ ಸಂಗ್ರಹಿಸಲಾಗುವುದು.

            ಅಬಕಾರಿ, ಪೊಲೀಸ್ ಮತ್ತು ಇತರರ ಸಮ್ಮುಖದಲ್ಲಿ ಶಾಲಾ ಮಟ್ಟದ ಜಾಗೃತ ಸಮಿತಿಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಶಾಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಡ್ರಗ್ಸ್  ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

            ಶಾಲಾ ಆವರಣದಲ್ಲಿ ನಿತ್ಯ ಸಂಚರಿಸುವ ಯುವಕರ ಮೇಲೆ ಅಬಕಾರಿ ಅಧಿಕಾರಿಗಳು ನಿಗಾ ವಹಿಸಿ ವೈಯಕ್ತಿಕ ಮಾಹಿತಿ ಸಂಗ್ರಹಿಸಬೇಕು ಎಂದು ಅಬಕಾರಿ ಆಯುಕ್ತರು ಸೂಚಿಸಿದ್ದಾರೆ. ಅವರು ಯಾವ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬ ಬಗ್ಗೆಯೂ ವಿಚಾರಣೆ ನಡೆಸುವಂತೆ ಆಯುಕ್ತರು ಸೂಚಿಸಿದ್ದಾರೆ. ಪ್ರತಿ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯ ಕಾರ್ಯವನ್ನು ಅಧಿಕಾರಿಗಳಿಗೆ ನಿಯೋಜಿಸಲಾಗಿದೆ. ಶಾಲಾ ಆವರಣದಲ್ಲಿ ಅಂಗಡಿ ವ್ಯಾಪಾರಿಗಳು, ಆಟೋ-ಟ್ಯಾಕ್ಸಿ ಚಾಲಕರು ಭಾಗವಹಿಸಿ ವಿಶೇಷ ಸಭೆ ನಡೆಸಲಾಗುವುದು. ಎಲ್ಲ ಶಾಲೆಗಳಲ್ಲಿ ಮಾದಕ ವಸ್ತು ವಿರೋಧಿ ಕ್ಲಬ್ ರಚಿಸುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಲಾಗುವುದು.

           ಶಾಲಾ ಆವರಣದಲ್ಲಿರುವ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದರೆ ಪರವಾನಗಿ ರದ್ದುಪಡಿಸಲಾಗುವುದು. ಅಬಕಾರಿ ಅಧಿಕಾರಿಗಳು ಈ ತಿಂಗಳ 30ರೊಳಗೆ ಎಲ್ಲ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಜೂನ್ 1 ರಿಂದ ಶಾಲೆಗಳಲ್ಲಿ ಮಫ್ತಿ ಗಸ್ತು ಇರುತ್ತದೆ. ಜೂನ್‍ನಲ್ಲಿ ಕಠಿಣ ಪರೀಕ್ಷೆ ನಡೆಯಲಿದೆ. ವಿಶೇಷ ಗಮನ ಹರಿಸಬೇಕಾದ ಶಾಲೆಗಳ ಆವರಣದಲ್ಲಿ ವಾರದಲ್ಲಿ ಕನಿಷ್ಠ ಮೂರು ದಿನ ನಿಗಾ ವಹಿಸಲಾಗುವುದು. ಅಧಿಕಾರಿಗಳು ಸಮವಸ್ತ್ರದಲ್ಲೇ ತೆರಳಬೇಕು ಎಂದು ಅಬಕಾರಿ ಇಲಾಖೆ ನಿರ್ಧರಿಸಿದೆ. ಶಾಲಾ ಅವಧಿಯಲ್ಲಿ ಮಕ್ಕಳು ಹೊರಗೆ ಹೋದರೆ ಪೆÇೀಷಕರಿಗೆ ತಿಳಿಸಲು ಕ್ರಮಕೈಗೊಳ್ಳಲಾಗುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries