ಪೆರ್ಲ: ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ, ಶ್ರೀ ಶಂಕರ ಸೇವಾ ಸಮಿತಿ, ಪೆರ್ಲದ ಶ್ರೀ ಶಂಕರಸದನ ರಜತಮಹೋತ್ಸವ ಸಮಿತಿಯ ಜಂಟಿ ಸಹಯೋಗದೊಂದಿಗೆ ಶ್ರೀ ಶಂಕರಸದನ ರಜತಮಹೋತ್ಸವ ವರ್ಷಾಚರಣೆಗೆ ಚಾಲನೆ ಮತ್ತು ನಿಧಿ ಸಂಗ್ರಹ ಸಮಾರಂಭದ ಉದ್ಘಾಟನೆ ಜೂ 24ರಂದು ಪೆರ್ಲ ಶ್ರೀ ಶಂಕರಸದನದಲ್ಲಿ ಜರುಗಲಿದೆ.
ಬೆಳಗ್ಗೆ 6.30ಕ್ಕೆ ಗಣಪತಿ ಹವನ, 9.15ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10.30ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. ಕರಾಡ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಕೊಮ್ಮುಂಜೆ ವೆಂಕಟಸುಬ್ಬ ರಾವ್ ಅಧ್ಯಕ್ಷತೆ ವಹಿಸುವರು. ರಜತಮಹೋತ್ಸವ ವರ್ಷಾಚರಣೆ ಮತ್ತು ನಿಧಿಸಂಗ್ರಹ ಅಭಿಯಾನಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡುವರು.
ಸಂಘದ ಅಧ್ಯಕ್ಷ ಎಡಪ್ಪಾಡಿ ಕೃಷ್ಣ ಮೂರ್ತಿ, ಡಆ. ಜಯಗೋವಿಂದ ಉಕ್ಕಿನಡ್ಕ, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಡಾ. ಅನಂತಪದ್ಮನಾಭ ಭಟ್ ಬಲೆಕ್ಕಳ, ಅಶೋಕ ಪೈ ಅಮೆಕ್ಕಳ, ವಿಘ್ನೇಶ ಶಿರಂತಡ್ಕ ಉಪಸ್ಥಿತರಿರುವರು.




