HEALTH TIPS

ಸಮನ್ಸ್‌ ಜಾರಿ ಅಧಿಕಾರವನ್ನು ಯಾಂತ್ರಿಕವಾಗಿ ಬಳಸಬಾರದು: ಸುಪ್ರೀಂ ಕೋರ್ಟ್‌

             ವದೆಹಲಿ: ಪ್ರಕರಣವೊಂದರ ವಿಚಾರಣೆ ನಡೆಯುತ್ತಿರುವಾಗ, ಎಫ್‌ಐಆರ್‌ ಅಥವಾ ದೋಷಾರೋಪಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸಿ ಸಮನ್ಸ್‌ ನೀಡುವ ಅಧಿಕಾರವನ್ನು ನ್ಯಾಯಾಲಯಗಳು ಯಾಂತ್ರಿಕವಾಗಿ ಬಳಸಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

             'ಒಬ್ಬ ವ್ಯಕ್ತಿ ವಿರುದ್ಧದ ಸಾಕ್ಷ್ಯಗಳಿಂದಾಗಿ ಮೇಲ್ನೋಟಕ್ಕೆ ಆತ ಆರೋಪಿಯಾಗಿ ಕಂಡುಬರುತ್ತಾನೆ ಎಂಬುದಕ್ಕಿಂತ ಆತನ ವಿರುದ್ಧದ ಅಪಾದನೆಗಳು ಮನದಟ್ಟಾಗುವಂತಿರಬೇಕು. ಅಂದಾಗ ಮಾತ್ರ ಆತನಿಗೆ ಸಮನ್ಸ್‌ ಜಾರಿ ಮಾಡಬೇಕು' ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠ ಹೇಳಿದೆ.

              'ಅಪರಾಧ ಕೃತ್ಯವೊಂದರಲ್ಲಿ ವ್ಯಕ್ತಿಯ ಪಾತ್ರವಿರುವುದನ್ನು ಆತನ ವಿರುದ್ಧದ ಸಾಕ್ಷ್ಯಗಳು ತೋರುತ್ತಿರಬೇಕು. ಆಗ, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 319ರ ಅಡಿ ದತ್ತವಾದ ಅಧಿಕಾರವನ್ನು ಬಳಸಿ, ಆತನಿಗೆ ಸಮನ್ಸ್‌ ನೀಡಬಹುದು. ವ್ಯಕ್ತಿಯನ್ನು ಆರೋಪಿಯನ್ನಾಗಿ ಹೆಸರಿಸದಿದ್ದರೂ, ಪ್ರಕರಣದ ಇತರ ಆರೋಪಿಗಳೊಂದಿಗೆ ಆತ ಕೂಡ ವಿಚಾರಣೆ ಎದುರಿಸಬೇಕು' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

                  ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ವಿಶೇಷ ನ್ಯಾಯಾಲಯವು ಜಿತೇಂದ್ರನಾಥ ಮಿಶ್ರಾ ಎಂಬುವವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಈ ಸಮನ್ಸ್‌ ರದ್ದುಗೊಳಿಸುವಂತೆ ಕೋರಿ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಅಲಹಾಬಾದ್ ಹೈಕೋರ್ಟ್‌ ಕಳೆದ ವರ್ಷ ಜೂನ್‌ 1ರಂದು ಆದೇಶಿಸಿತ್ತು.

                  ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಿಶ್ರಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, ಮಿಶ್ರಾ ಅವರ ಮೇಲ್ಮನವಿಯನ್ನು ವಜಾಗೊಳಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries