HEALTH TIPS

ತ್ರಿವಳಿ ರೈಲು ಅಪಘಾತ : ವಿದ್ಯುತ್ ಪ್ರವಹಿಸಿ 40 ಪ್ರಯಾಣಿಕರ ಸಾವು!

                ಬಾಲೇಶ್ವರ: ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ರೈಲಿನಲ್ಲಿ ವಿದ್ಯುತ್ ಪ್ರವಹಿಸಿ 40 ಪ್ರಯಾಣಿಕರು ಮೃತಪಟ್ಟಿದ್ದಾರೆ.

                ಅಪಘಾತದಲ್ಲಿ ಒಟ್ಟು 278 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇವರಲ್ಲಿ 40 ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ.

            ಬಾಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲೂ, 'ರೈಲು ಮಾರ್ಗದಲ್ಲಿನ ವಿದ್ಯುತ್‌ ತಂತಿಗಳು ಅಪಘಾತದ ನಂತರ ತುಂಡಾದವು. ಅವು ಕೆಲ ಬೋಗಿಗಳಿಗೆ ತಗುಲಿದ್ದರಿಂದ ಒಳಗೆ ಸಿಲುಕಿದ ಪ್ರಯಾಣಿಕರಿಗೆ ವಿದ್ಯುತ್ ಪ್ರವಹಿಸಿರುವ ಸಾಧ್ಯತೆ ಇದೆ' ಎಂದೆನ್ನಲಾಗಿದೆ.

             ಪಿಎಸ್‌ಯ ಪಿ. ಕುಮಾರ ನಾಯಕ್ ಪ್ರತಿಕ್ರಿಯಿಸಿ, 'ರೈಲುಗಳ ಡಿಕ್ಕಿಯಿಂದ ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ರೈಲು ಹಳಿಗಳ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬೋಗಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.

                  ಹೌರಾ-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌, ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್ ರೈಲುಗಳ ನಡುವೆ ಜೂನ್ 2ರಂದು ಸಂಜೆ 7.20ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಇದರಲ್ಲಿ 278 ಪ್ರಯಾಣಿಕರು ಮೃತಪಟ್ಟು, ಸುಮಾರು 1200 ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ವಂಸಕ ಕೃತ್ಯ ನಡೆದಿದೆ ಎಂಬ ರೈಲ್ವೆ ಮಂಡಳಿಯ ಶಿಫಾರಸಿನ ಮೇಲೆ ಸಿಬಿಐ ತನಿಖೆ ಆರಂಭಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries