HEALTH TIPS

ಮಾನವಸಹಿತ ಆಳಸಮುದ್ರ ಯಾನಕ್ಕೆ ಭಾರತ ಸಜ್ಜು; 2026ರ ವೇಳೆಗೆ ಸಾಕಾರ

               ವದೆಹಲಿಭಾರತ ಮಾನವಸಹಿತ ಗಗನಯಾನಕ್ಕೆ ಸಜ್ಜಾಗುತ್ತಿರುವ ನಡುವೆಯೇ, ಸದ್ದಿಲ್ಲದೆ ಮಾನವಸಹಿತ 'ಸಮುದ್ರಯಾನ'ವನ್ನೂ ಕೈಗೊಳ್ಳಲು ಸಜ್ಜಾಗಿದೆ. ಆಳ ಸಾಗರ ಮತ್ತು ಅದರ ಸಂಪನ್ಮೂಲಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಈ ಯೋಜನೆ 2026ರಲ್ಲಿ ಸಾಕಾರಗೊಳ್ಳಲಿದೆ.

                 ಜಲಾಂತರ್ಗಾಮಿ (ಸಬ್​ವುರ್ಸಿಬಲ್) ವಾಹನದ ಮೂಲಕ ಮೂವರನ್ನು ಸಮುದ್ರದಲ್ಲಿ 6,000 ಮೀಟರ್ ಆಳಕ್ಕೆ ಕಳುಹಿಸಿಕೊಡಲು ಮಾಡ್ಯೂಲ್ ಸಿದ್ಧವಾಗಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಘೊಷಣೆ ಮಾಡಿದ್ದಾರೆ.

ಸಮುದ್ರಯಾನ ಭಾರತದ ಮೊದಲ ಮಾನವಸಹಿತ ಸಾಗರ ಯೋಜನೆಯಾಗಿದ್ದು, ಆಳ ಸಮುದ್ರದ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಮತ್ತು ಜೀವವೈವಿಧ್ಯ ಮೌಲ್ಯಮಾಪನ ಕೈಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ಜಲಾಂತರ್ಗಾಮಿ ವಾಹನವನ್ನು ಕೇವಲ ಪರಿಶೋಧನೆಯ ಉದ್ದೇಶಗಳಿಗಾಗಿ ಮಾತ್ರ ಬಳಸುವುದರಿಂದ ಈ ಯೋಜನೆಯಿಂದ ಯಾವುದೇ ಪರಿಸರ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನು ಚೆನ್ನೈನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಸಾಗರ ತಂತ್ರಜ್ಞಾನ ರಾಷ್ಟ್ರೀಯ ಸಂಸ್ಥೆ- ಎನ್​ಐಒಟಿ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿದೆ.

ಇದುವರೆಗೂ ಅನ್ವೇಷಣೆ ಮಾಡಲಾಗದ ಆಳ ಸಮುದ್ರ ಪ್ರದೇಶಗಳನ್ನು ವೈಜ್ಞಾನಿಕ ಸಿಬ್ಬಂದಿಗೆ ನೇರವಾಗಿ ವೀಕ್ಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ                      ಉದ್ದೇಶವಿರುವುದರಿಂದ ಈ ಯೋಜನೆಯು ಮಹತ್ವದ್ದಾಗಿದೆ. ಇದು ಕೇಂದ್ರ ಸರ್ಕಾರದ 'ಹೊಸ ಭಾರತ'ದ ದೃಷ್ಟಿಕೋನಕ್ಕೆ ಅನುರೂಪವಾಗಿದ್ದು, ನೀಲಿ ಆರ್ಥಿಕತೆಯ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಒಂದಾಗಿ ಎತ್ತಿ ತೋರಿಸುತ್ತದೆ.

                                                 ಎಲೈಟ್ ಕ್ಲಬ್​ಗೆ ಭಾರತ

                 ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾ ಸೇರಿದಂತೆ ಆಳ ಸಮುದ್ರಯಾನಗಳನ್ನು ನಡೆಸಲು ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿರುವ ದೇಶಗಳ ಗಣ್ಯ ಗುಂಪಿಗೆ ಭಾರತವು ಈ ಯೋಜನೆಯ ಮೂಲಕ ಸೇರ್ಪಡೆಯಾಗಲಿದೆ.

                                        ಮತ್ಸ್ಯ 6000

               ಈ ಯಾನಕ್ಕಾಗಿ ನಿರ್ವಿುಸಲಾಗುತ್ತಿರುವ ವಾಹನಕ್ಕೆ 'ಮತ್ಸ್ಯ 6000' ಎಂದು ನಾಮಕರಣ ಮಾಡಲಾಗಿದೆ. ಈ ವಾಹನವು ಸಾಮಾನ್ಯ ಕಾರ್ಯಾಚರಣೆಯಲ್ಲಿ 12 ಗಂಟೆಗಳ ಕಾಲ ಮತ್ತು ಮಾನವ ಸುರಕ್ಷತೆಗಾಗಿ ತುರ್ತು ಸಂದರ್ಭದಲ್ಲಿ 96 ಗಂಟೆಗಳ ಕಾಲ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

                                      4,077 ಕೋಟಿ ರೂ. ವೆಚ್ಚ

               ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಡೀಪ್ ಓಷನ್ ಮಿಷನ್​ನ (ಆಳ ಸಾಗರ ಕಾರ್ಯಯೋಜನೆ) ವೆಚ್ಚವನ್ನು ಐದು ವರ್ಷಗಳ ಅವಧಿಗೆ 4,077 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries