ವಯನಾಡ್ (PTI): ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
0
samarasasudhi
ಆಗಸ್ಟ್ 05, 2023
ವಯನಾಡ್ (PTI): ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಲೋಕಸಭಾ ಸಚಿವಾಲಯವು ಆದಷ್ಟು ಬೇಗ ರಾಹುಲ್ ಅವರ ಸದಸ್ಯತ್ವವನ್ನು ಮರು ಸ್ಥಾಪನೆ ಮಾಡುತ್ತದೆ ಎಂಬ ವಿಶ್ವಾಸವನ್ನು ಇಲ್ಲಿನ ಜನರು ವ್ಯಕ್ತಪಡಿಸಿದರು.
'ನಾವು ನಮ್ಮ ನಾಯಕನನ್ನು (ಲೋಕಸಭಾ ಕ್ಷೇತ್ರದ) ವಾಪಸ್ ಪಡೆದಿದ್ದೇವೆ' ಎಂದು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
'ರಾಹುಲ್ ಅವರಿಗೆ ಅಂತಿಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ಬಿಜೆಪಿಯ ಸೇಡಿನ ರಾಜಕೀಯದ ವಿರುದ್ಧ ಬಂದಿರುವ ತೀರ್ಪು' ಎಂದು ಕಾಂಗ್ರೆಸ್ ಕಾರ್ಯಕರ್ತ ಸಾಲಿಹ್ ಎಂಬುವರು ಪ್ರತಿಕ್ರಿಯಿಸಿದರು.
'ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಎಲ್ಲರಿಗೂ ಸುಪ್ರೀಂ ಕೋರ್ಟ್‌ನ ಈ ತೀರ್ಪು ಹೆಚ್ಚು ಸಂತಸ ತಂದಿದೆ. ಇದು ಮೋದಿ ವಿರುದ್ಧ ಬಂದಿರುವ ತೀರ್ಪು' ಎಂದು ಮತ್ತೊಬ್ಬ ಕಾರ್ಯಕರ್ತ ವಿನೋದ್ ಕುಮಾರ್ ಸಂತಸ ಹಂಚಿಕೊಂಡರು.