HEALTH TIPS

ಚಂದ್ರನಿಗೇಕೆ ಚಂದ್ರಚೂಡನ ಹೆಸರು.....??? :ಬರಹ: ಎಂ.ನಾ.ಚಂಬಲ್ತಿಮಾರ್

 ಇದನೇಕರಿಗೆ ಈ ಶ್ರಾವಣದ ದಿನಗಳಲ್ಲಿ ಮಂಡೆಬೆಚ್ಚ ಮೂಡಿಸಿದ್ದಂತೂ ಹೌದು.. !

ಚಂದ್ರ ನ ದಕ್ಷಿಣ ಧ್ರುವಕ್ಕೆ ಭಾರತ ಮೊದಲಮುದ್ರೆಯೊತ್ತಿ ಕಾಲೂರಿದ ಜಾಗಕ್ಕೆ 'ಶಿವ ಶಕ್ತಿ ಪಾಯಿಂಟ್' ಎಂದು ದೇಶದ ಪ್ರಧಾನಮಂತ್ರಿ ಇಸ್ರೋ ವಿಜ್ಞಾನಿಗಳ ಸಮಕ್ಷಮದಲ್ಲಿ ಘೋಷಿಸಿದ್ದೇ ಘೋಸಿದ್ದು, ದೇಶದೊಳಗೇ ಅದೆಂಥ ಸಂಭ್ರಮ, ಅದೆಷ್ಟೋ ತಳಮಳ... 

ಒಬ್ಬೊಬ್ಬರದು ಒಂದೊಂದು ರೀತಿಯ ಆಕ್ರೋಶ. 
ಅತೃಪ್ತಿ, ವ್ಯಂಗ್ಯ ,ಕುಹಕಗಳ ನಡುವೆಯೇ ಇದು ರಾಜಕೀಯ ಹುನ್ನಾರವೆಂಬ ಟೀಕೆಯೂ...!
 ಒಟ್ಟಿನಲ್ಲಿ ಚಂದ್ರಯಾನದ ಸಾಧನೆಯನ್ನು ಅರಿತು ಕೊಂಡಾಡುವ ಬದಲು, ಅಭಿಮಾನದಿಂದ ಬೀಗುವ ಬದಲು,  ವಿಮರ್ಶಿಸಿ ಬಾಯ್ಕೊಳಕು ಮಾಡಿಕೊಂಡವರಿಗೆ ನಿಜಕ್ಕೂ ಸಲಾಮು ಸಲ್ಲಬೇಕು... 
ಏಕೆಂದರೆ ಚಂದ್ರನೊಳಗಿನ ನೆಲಕ್ಕೆ ಯಾಕೆ ಈ ಹೆಸರಿಟ್ಟರೆಂದು ಕನಿಷ್ಠ ಯೋಚಿಸುವಂತೆ ಇದು ಮಾಡಿದರೆ ಅದೇ ಪುಣ್ಯ! 

ಹಿಂದೆ ಚಂದ್ರ ಯಾನ -1ಕ್ಕೆ ಆಗಿನ ಕಾಂಗೈ ಸರಕಾರ ಜವಾಹರ್ ಪೋಯಿಂಟ್ ಎಂದೇ ಹೆಸರಿಟ್ಟಿತ್ತು.!
ಅನಂತರ ಇಸ್ರೋ ಮುಖ್ಯಸ್ಥರಾದ ತಮಿಳ್ನಾಡಿನ ಶಿವನ್ ಸಾರಥ್ಯದಲ್ಲಿ ನಡೆದ ಚಂದ್ರಯಾನ್  95ಶೇ.ಯಶಸ್ವಿಯಾಗಿ ಅಂತಿಮಕ್ಷಣ ವಿಫಲಗೊಂಡರೂ ಚಂದಿರನೂರಿಗೆ ಭಾರತ ಮುತ್ತಿಡುವಲ್ಲಿ ಯಶ ಕಂಡಿತ್ತು. ಆ ನೆಲಕ್ಕೆ ದೇಶದ ತ್ರಿವರ್ಣದ ಸಂಕೇತ "ತಿರಂಗಾ " ಎಂದು ಹೆಸರಿಡಲಾಗಿತ್ತು. 
ಅನಂತರ ಮೂರನೇ ಸರದಿಯಲ್ಲಿ ಭಾರತ ಸಂಪೂರ್ಣ ಯಶಕಂಡಿದ್ದು, ಆ ನೆಲವನ್ನೀಗ ಶಿವಶಕ್ತಿ ಎಂದದ್ದೇ ದೇಶದೊಳಗೊಂದು ಅಸಹಿಷ್ಣುತೆಯ ದನಿ ಎಬ್ಬಿಸಿದೆ. 
ವಿಚಾರ ಹೀನ ಮಾತುಗಳ ವಾಸನೆ ಎಲ್ಲೆಡೆ ಹಬ್ಬಿದೆ. 
ಅತ್ರೃಪ್ತಿಯ ಹುಯಿಲು, ಗೋಳು ಮಾಧ್ಯಮಗಳಲ್ಲಿ ರಾರಾಜಿಸುತ್ತವೆ. 

ಬಾಹ್ಯಾಕಾಶ ಸಾಧನೆ ಮಾಡಿದ ಎಲ್ಲಾ ದೇಶಗಳೂ ಅವರ ಸಾಧನೆಯ ಹಿನ್ನೆಲೆಯಲ್ಲಿ ಹೀಗೆ ಹೆಸರಿಡುವ ಕ್ರಮಗಳಿವೆ. ಇಂಥ ಅಧಿಕಾರ ಭಾರತ ಸರಕ್ಕಾರಕ್ಕಿದೆ. ಅದನ್ನು ಸಂಸತ್ತಿನಲ್ಲಿ ಆಯ್ಕೆ ಮಾಡುವ ಸಂಪ್ರದಾಯವಿಲ್ಲ. 
ಆದರೀಗ "ಚಂದಿರನೂರಲ್ಲಿ ಶಿವಶಕ್ತಿಯ ಹೆಸರು ನಮ್ಮ ಬಾಹ್ಯಾಕಾಶ ಸಾಧನೆಯನ್ನು ಮಂಕಾಗಿಸಿದೆ, ವಿಜ್ಞಾನ ಜಗತ್ತಿನಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ"ಯೆಂದು ಆಕ್ಷೇಪ. 

ಆಕ್ಷೇಪಗಳು,ಟೀಕೆಗಳು ಸ್ವಾಗತಾರ್ಹ.
 ಆಕ್ಷೇಪಗಳಿಂದಲೇ ಅನ್ವೇಷಣೆ ಆರಂಭವಾಗಬೇಕು. 
ಅಲ್ಲ ಶಿವಶಕ್ತಿ ಎಂದು ಸದಾ ಚಂದ್ರನನ್ನೇ ಶಿರದಲ್ಲಿ ಧರಿಸಿಕೊಂಡವನ ಹೆಸರನ್ನು ಯಾಕಿಟ್ಟಿರಬಹುದು?? 
ಕೊಂಚ ಯೋಚಿಸಬಾರದೇ...? 
ಶಿವಂ,  ಶಿವೋಹಂ ಎಂದರೇನು?  ಸತ್ಯಂ, ಶಿವಂ, ಸುಂದರಂ ಎನ್ನುವುದೇಕೆ..?  
ಅನ್ವೇಷಿಸಿದರೆ ಅರ್ಥವಾಗುತ್ತದೆ. ವಾದಿಸಿ ತಿಳಿಸುವ ಯತ್ನಕ್ಕಿಂತ ಶೋಧಿಸಿ ಅರಿಯುವ ಪ್ರಪಂಚ ಪ್ರಯತ್ನಗಳೇ ಮೇಲು ತಾನೇ? 

ಸಮುದ್ರಮಥನದ ಕಾಲದಲ್ಲಿ ಪಾಲ್ಗಡಲನ್ನು ಕಡೆದಾಗ ದೊರೆತ ವಜ್ರವೈಢೂರ್ಯಗಳಿಗೆ ತಾಮುಂದೆ ತಾಮುಂದೆ ಎಂದು ಧಾವಿಸಿದ್ದ ದೇವತೆಗಳು ಹಾಲಾಹಲ ಸಿಕ್ಕಾಗ ಉಪೇಕ್ಷಿಸಿದರು. 
ಅದನ್ನೇನು ಮಾಡುವುದು...? 
ಎಲ್ಲರ ಭಿನ್ನಹದಂತೆ ಶಿವನೇ ಸೇವಿಸಿದ! 
ತಕ್ಷಣವೇ ಪಾರ್ವತಿ ಶಿವನ ಕೊರಳು ಅಮುಕಿ ಹಿಡಿದಳು. ಹಾಲಾಹಲ ಹೆಪ್ಪುಗಟ್ಟಿತು. ಶಿವ ನೀಲಕಂಠನಾದ. 
ಗಂಟಲಿನಲ್ಲಿ ವಿಷ ಹೆಪ್ಪಾದದ್ದೇ ತಡ ಶಿವನ ದೇಹವಿಡೀ ಉಷ್ಣದಿಂದ ದಹದಹಿಸಿತು...! 
ಸಹಜವಾಗಿಯೇ ಚಂದ್ರ ಶೀತಲ ಗುಣದವನು. 
ದೇವತೆಗಳೆಲ್ಲರ ಭಿನ್ನಹದಂತೆ ಚಂದ್ರ ಶಿವನ ಮುಡಿಯೇರಿದ. 
ಚಂದ್ರಚೂಡನಾದ. ಹೀಗೆ ತಲೆ ಏರಿ ಕುಳಿತ ಚಂದ್ರ ಶಿವನ ದೇಹ ತಂಪಾದರೂ ಇಳಿಯಲಿಲ್ಲ. ಅಲ್ಲೇ ನೆಲೆಸಿದ..!
ಹಾಗಿದ್ದರೆ ಶಿವ , ಶಿವೋಹಂ ಅಂದರೆ ಭೂಮಂಡಲವೇ?  

ಇದೇ ಚಂದ್ರನಿಗೆ 27ನಕ್ಷತ್ರಗಳೇ ಮಡದಿಯರು. ಅವರೆಲ್ಲರೂ ದಕ್ಷಪ್ರಜಾಪತಿಯ ಮಕ್ಕಳು. ಈ ಪೈಕಿ ಚಂದ್ರನಿಗೆ ರೋಹಿಣಿಯಲ್ಲಷ್ಟೇ ವಿಶೇಷ ಮಮತೆ. ಸದಾ ಆಕೆಯೊಂದಿಗೇ ಇರೋದು ಉಳಿದವರ ಧ್ವೇಷಕ್ಕೆ ಕಾರಣವಾಗುತ್ತದೆ. ಅವರು ದಕ್ಷನಿಗೆ ದೂರಿಡುತ್ತಾರೆ. ಕುಪಿತ ದಕ್ಷ ಚಂದ್ರನಿಗೆ ಕ್ಷಯ ಬಾಧಿಸುವ ಶಾಪ ನೀಡುತ್ತಾನೆ. ಈ ಶಾಪದಿಂದ ಚಂದ್ರ ಕ್ಷಯಿಸುತ್ತಾನೆ. ಆದರೆ ಪರಮೇಶ್ವರ ಕಾಪಾಡುತ್ತಾನೆ... 
ಹಾಗೆಂದು ಈ ಕಾರಣದ ಕತೆಗೆ  ಈಗ ಹೆಸರಿಸಿದ್ದಲ್ಲ!! 
ಚಂದ್ರನೂ ಶಿವನಿಗೂ ಅಭೇಧ್ಯ ನಂಟಿನ ಕತೆ ಪುರಾಣದಲ್ಲಿದೆ. 
ಅದು ಜೀವಜಾಲದ ಸ್ಥಿತಿ ಲಯಗಳ ಕತೆ... ವೇದ ಪುರಾಣದಲ್ಲಿ ಹೇಳಿದ ಚಂದ್ರನ ಕತೆಗಳೇ ವಿಜ್ಞಾನ ದ ಮೂಲಕ ಪಾಶ್ಚಾತ್ಯ ಆವಿಷ್ಕಾರದಲ್ಲಿ ಹೇಳಲಾಗುತ್ತಿದೆ.. 

ಇತ್ತ ವರ್ತಮಾನ ದಲ್ಲಿ ಚಂದ್ರಯಾನ ಎಂಬ ಭಾರತದ ಕನಸನ್ನು ಬಹುಭಾಗ ಸಾಧಿಸಿದವರು ಈ ಹಿಂದಿನ ಇಸ್ರೋ ಮುಖ್ಯಸ್ಥ ತಮಿಳುನಾಡಿನ ಶಿವನ್. 
ಅವರದ್ದು ಶಿವನದ್ದೇ ಹೆಸರು..?! 
ಅವರು ಚಂದ್ರಯಾನ  ಎಲ್ಲ ಸಫಲವಾಗಿ ಕೊನೇ ಕ್ಷಣದ ಲ್ಯಾಂಡಿಂಗ್ ನಲ್ಲಿ ಗುರಿತಪ್ಪಿ ವಿಫಲವಾದಾಗ ಪ್ರಧಾನಿ ಮೋದಿಯವರ ಕಣ್ಮುಂದೆ ಮಗುವಿನಂತೆ ಅತ್ತಿದ್ದರು. 
ರಾಷ್ಟ್ರಶಿಲ್ಪಿಗಳಾದ ವಿಜ್ಞಾನಿ ಮುಖಂಡ ರಾಷ್ಟ್ರದ ನಾಯಕನ ಕೈಯಲ್ಲಿ ಕೈಯಿಟ್ಟು ಅತ್ತಾಗ ಪ್ರಧಾನಿಯೇ ಸಂತೈಸಿದ್ದರು. 
ಅಂದು ಅವರು ಮತ್ತು ಬಳಗದ ವಿಜ್ಞಾನಿಗಳು ಸೋತಲ್ಲಿಂದಲೇ ಮುನ್ನಡೆದು ಅದೇ ವಿಜ್ಞಾನಿಗಳ ಬಳಗ ಇಂದು ಚಂದ್ರನಲ್ಲಿ ಭಾರತದ ವಿಜಯ ಪತಾಕೆ ನೆಟ್ಟಿದ್ದಾರೆ. 
ಈಗ ಇಸ್ರೋ ಮುಖ್ಯಸ್ಥರಾಗಿ ಸಾರಥ್ಯ ವಹಿಸಿದ ನಾಯಕನಷ್ಟೇ ಬದಲಾಗಿದ್ದಾರೆ. 
ಉಳಿದೆಲ್ಲ ಅದೇ ಟೀಂ... 
ಈಗ ನಾಯಕನಾದವರೂ ಸೋಮನಾಥನ್. 
ಸೋಮನೆಂದರೆ ಚಂದಿರ...!!!

ಇದರಲ್ಲನೇಕರು ಮಹಿಳಾ ವಿಜ್ಞಾನಿಗಳು...! 
ಆದ್ದರಿಂದಲೇ ಇದು ನಾರೀಶಕ್ತಿಯ ವಿಜಯ ಎಂದು ಮೋದಿ ಕೊಂಡಾಡಿದ್ದು, ಭಾವಪರವಶರಾದದ್ದು! 
ಶಿವನೂ ಅರ್ಧ ನಾರೀಶ್ವರ. ಅದು ಪ್ರಕೃತಿ ತತ್ವ. 
ಈ ಎಲ್ಲಾ ಹಿನ್ನೆಲೆಯಲ್ಲಿ ಶಿವಶಕ್ತಿ ಎಂಬ ನಾಮಕರಣವಾಗಿದೆ. ಇಷ್ಟಕ್ಕೂ ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶದ ಜಾಗತಿಕ ಸಾಧನೆಗೆ ಈ ದೇಶದ ಸನಾತನೀಯ ಪೂರ್ವ ಪರಂಪರೆಯೊಂದಿಗೆ ತಳುಕು ಹಾಕಿದ ಹೆಸರಿಟ್ಟರೆ ದೇಶದ ಪ್ರಜೆಗಳಾದ ಇವರೇಕಿಷ್ಟು ಉರಿಯುತ್ತಾರೆ...?? 
ಉತ್ತರ ಸ್ಪಷ್ಟ ತಾನೇ..??

                                                         ಬರಹ   * ಎಂ. ನಾ. ಚಂಬಲ್ತಿಮಾರ್ @ಕಣಿಪುರ 
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries