ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ವಾಟ್ಸ್‌ಆಯಪ್ ಗ್ರೂಪ್ ಅಡ್ಮಿನ್ ಒಬ್ಬರನ್ನು ಪೊಲೀಸರು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 07, 2023
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ವಾಟ್ಸ್‌ಆಯಪ್ ಗ್ರೂಪ್ ಅಡ್ಮಿನ್ ಒಬ್ಬರನ್ನು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 4ರಂದು (ಶುಕ್ರವಾರ) ಸಿಎಂ ಯೋಗಿ ಆದಿತ್ಯನಾಥ ವಿರುದ್ಧದ ಕಾಮೆಂಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು ಎಂದು ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್‌ಕುಮಾರ್ ಸೇಠ್ ತಿಳಿಸಿದ್ದಾರೆ.
ಬಂಧಿತ ವಾಟ್ಸ್‌ಆಯಪ್ ಗ್ರೂಪ್ ಅಡ್ಮಿನ್‌ನನ್ನು ಸಹಾಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆದರೆ, ಕಾಮೆಂಟ್ ಪೋಸ್ಟ್ ಮಾಡಿದ ವ್ಯಕ್ತಿಯನ್ನು 'ಮುಸ್ಲಿಂ ಅನ್ಸಾರಿ' ಎಂದು ಗುರುತಿಸಲಾಗಿದೆ. ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆ. 4ರಂದು ಟ್ವಿಟರ್ ಮೂಲಕ ದೂರು ಸ್ವೀಕರಿಸಲಾಗಿದೆ. ದೂರಿನ ಆಧಾರದ ಮೇಲೆ ಸಹಾಬುದ್ದೀನ್ ಅನ್ಸಾರಿ ಮತ್ತು ಮುಸ್ಲಿಂ ಅನ್ಸಾರಿ ವಿರುದ್ಧ ಐಪಿಸಿ, ಐಟಿ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಜಯ್‌ಕುಮಾರ್ ಸೇಠ್ ಮಾಹಿತಿ ನೀಡಿದ್ದಾರೆ.
ವಾಟ್ಸ್‌ಆಯಪ್ ಗ್ರೂಪ್‌ನ ಹೆಸರು 'ನಗರ ಪಾಲಿಕೆ ಪರಿಷತ್ ಭದೋಹಿ' ಎಂದು ತಿಳಿದುಬಂದಿದೆ. ಇದರಲ್ಲಿ ಭದೋಹಿ ನಗರ ಪಾಲಿಕೆ ಪರಿಷತ್‌ನ ಬಹುತೇಕ ಎಲ್ಲಾ ಕಾರ್ಪೊರೇಟರ್‌ಗಳು ಮತ್ತು ಸಾರ್ವಜನಿಕರು ಇದ್ದಾರೆ. ಆದರೆ, ಇದು ಕಾರ್ಪೊರೇಟರ್‌ಗಳ ಅಧಿಕೃತ ವಾಟ್ಸ್‌ಆಯಪ್ ಗ್ರೂಪ್ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.