ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಆನಂದ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು (ಗುರುವಾರ) ಕೂಲಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
0
samarasasudhi
ಸೆಪ್ಟೆಂಬರ್ 21, 2023
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಆನಂದ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು (ಗುರುವಾರ) ಕೂಲಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
ಕಾಂಗ್ರೆಸ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದೆ.
'ಜನರ ನಾಯಕ ರಾಹುಲ್ ಗಾಂದಿ ಅವರು ದೆಹಲಿ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು ಕೂಲಿ ಸ್ನೇಹಿತರನ್ನು ಭೇಟಿಯಾದರು. ಕೂಲಿ ಸ್ನೇಹಿತರೊಬ್ಬರು ರೈಲು ನಿಲ್ದಾಣದ ಸ್ಥಿತಿಗತಿ ಕುರಿತು ಬೇಸರ ವ್ಯಕ್ತಪಡಿಸಿದ್ದ ಹಾಗೂ ರಾಹುಲ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಭಾರತ್ ಜೋಡೊ ಯಾತ್ರೆ ಮುಂದುವರಿದಿದೆ' ಎಂದು ಬರೆದುಕೊಂಡಿದೆ.