ಬದಿಯಡ್ಕ: ಪುರುಷೋತ್ತಮ ಯಾಗ ಸಮಿತಿ ಕುಂಬಳೆ ಸೀಮೆಯ ನೇತೃತ್ವದಲ್ಲಿ ಶ್ರೀರಾಮ ಸೀತೆಯರ ಆದರ್ಶವನ್ನು ಮೈಗೂಡಿಸಿ ಕುಂಬಳೆಸೀಮೆಯನ್ನು ಆರೋಗ್ಯಪೂರ್ಣ ಸಂಪದ್ಭರಿತ ಜ್ಞಾನಸಂಪನ್ನ ಆದರ್ಶ ಸೀಮೆಯನ್ನಾಗಿ ಮಾಡುವ ಸಂಕಲ್ಪದ ಯಶಸ್ವಿಗಾಗಿ ನವಂಬರ್ 19ರಂದು ಭಾನುವಾರ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ಮಾರ್ಗದರ್ಶನದಲ್ಲಿ ಪುರುಷೋತ್ತಮ ಯಾಗ, ಧನ್ವಂತರಿ ಪೂಜೆ ಮತ್ತು ಶ್ರೀರಾಮಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬದಿಯಡ್ಕ ಗಣೇಶಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಧಾರ್ಮಿಕ ಸಾಮಾಜಿಕ ಮುಂದಾಳು ಜಯದೇವ ಖಂಡಿಗೆ ಬಿಡುಗಡೆಗೊಳಿಸಿ ಮಾತನಾಡಿ, ಯಾಗವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಹಿಂದೂ ಮನೆಯೂ ಜಾಗೃತವಾಗಬೇಕಿದೆ. ರಾಮನಾಮ ತಾರಕ ಮಂತ್ರ ಜಪ, ಯಾಗದಿಂದ ನಾಡಿಗೆ ಒಳಿತಾಗಲಿ ಎಂದರು.
ಯಾಗ ಸಮಿತಿ ಪದಾಧಿಕಾರಿಗಳಾದ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು, ನಾರಾಯಣ ಶೆಟ್ಟಿ ನೀರ್ಚಾಲು, ಬಾಲಕೃಷ್ಣ ನೀರ್ಚಾಲು, ಮಂಜುನಾಥ ಮಾನ್ಯ, ಲೋಹಿತಾಕ್ಷ ಬದಿಯಡ್ಕ, ಲಕ್ಷ್ಮಣ ಪ್ರಭು ಬದಿಯಡ್ಕ, ರಾಜನ್ ಮುಳಿಯಾರ್, ದಾಮೋದರನ್ ಬೋವಿಕ್ಕಾನ, ಕೃಷ್ಣನ್ ಬೋವಿಕ್ಕಾನ, ಸುರೇಶ್ ಬಾಬು ಕಾನತ್ತೂರು, ಶಾರದಾ ಎಸ್ ಭಟ್ ಕಾಡಮನೆ, ದಿವ್ಯ ಪಿ ಭಟ್ ಪಳ್ಳತ್ತಡ್ಕ, ಮಮತಾ ಬದಿಯಡ್ಕ, ಶಾಂತಕುಮಾರಿ ಟೀಚರ್ ಪಳ್ಳತ್ತಡ್ಕ ಭಾಗವಹಿಸಿದ್ದರು.

.jpg)
