ಕುಂಬಳೆ: ಬದಿಯಡ್ಕ ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗದ ಯಶಸ್ಸಿಗಾಗಿ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು.
ಮಾರ್ಗದರ್ಶನ ಮಂಡಳಿಯ ರಘುನಾಥ ಪೈ ಕುಂಬಳೆ, ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು, ಯಾಗ ಸಮಿತಿಯ ಕೋಶಾಧಿಕಾರಿ ಮಂಜುನಾಥ್ ಮಾನ್ಯ, ಭಜನಾ ಸಮಿತಿಯ ಬಾಲಕೃಷ್ಣ ನೀರ್ಚಾಲು, ಧಾರ್ಮಿಕ ಮುಂದಾಳು ಪ್ರಭಾಕರ, ಪ್ರದೀಪ್ ಕೃಷ್ಣನಗರ ಕುಂಬಳೆ, ರೋಷನ್ ಕಳತ್ತೂರು ಹಾಗೂ ಇನ್ನಿತರ ಭಕ್ತಾದಿಗಳು ಪಾಲ್ಗೊಂಡಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರು ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಪ್ರಸಾದವನ್ನಿತ್ತು ಹರಸಿದರು.


